Home Archive by category Fresh News (Page 45)

“ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ – ಫೆಬ್ರವರಿ 13”

ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ (B.D.S) ಪಡೆದ ಬಳಿಕ ಸುಮಾರು ಒಂಭತ್ತು ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತಕೋತರ ಪದವಿ (M.D.S) ಪಡೆಯುವ ಅವಕಾಶÀವಿದೆ. ಇದರಲ್ಲಿ ಒಂದು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ

ಅಪಸ್ಮಾರ ಮತ್ತು ಅಪನಂಬಿಕೆಗಳು

ವಿಶ್ವ ಅಪಸ್ಮಾರ ಜಾಗೃತಿ ದಿನ – ಫೆಬ್ರವರಿ 12 ಪ್ರತಿ ವರ್ಷ ವಿಶ್ವದಾದ್ಯಂತ ಫೆಬ್ರವರಿ ತಿಂಗಳ ಎರಡನೇ ಸೋಮವಾರದಂದು “ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ” ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತಿನಾದ್ಯಂತ ಸರಿಸುಮಾರು 65 ಮಿಲಿಯನ್ ಮಂದಿ ಈ ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು, ಈ ಖಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸಿಮೀತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ

ಮಂಗಳೂರು ರಥೋತ್ಸವ ಪ್ರಾರಂಭ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಇಂದು ಸೋಮವಾರ ಧ್ವಜಾರೋಹಣ ಮೂಲಕ ವಿದ್ಯುಕ್ತವಾಗಿ ಪ್ರಾರಂಭವಾಯಿತು . ರಥೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರು ಯಜ್ಞಕ್ಕೆ ಚಿತ್ತೈಸಿದರು ಬಳಿಕ ಯಜ್ಞದಲ್ಲಿ ಲಘು ಪೂರ್ಣಾಹುತಿ ಧ್ವಜಾರೋಹಣ ನೆರವೇರಿತು . ಬಳಿಕ ಸಮಾರಾಧನೆ ನಡೆಯಿತು . ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ

ಮಾಣಿ : ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್‌ನ ವಾರ್ಷಿಕ ಕಾರ್ಯಕ್ರಮ, ಪದಗ್ರಹಣ ಸಮಾರಂಭ

ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಇದರ ವಾರ್ಷಿಕ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭವು ಪೆರ್ಲಾಪು ಪ್ರಾಥಾಮಿಕ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲರಾದ ಎ ಕೃಷ್ಣಪ್ಪ ಪೂಜಾರಿ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅವರಲ್ಲಿ ನೈತಿಕ ಗುಣಮಟ್ಟವನ್ನು ಬೆಳೆಸಿ,ಬೇರೆ ಯಾವುದೇ ಆಸ್ತಿಮಾಡಿ ಕೊಡುವ ಅಗತ್ಯವಿಲ್ಲ. ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ರಿ ಇದರ ಗೌರವಾಧ್ಯಕ್ಷರಾದ ಮೋಹನ್

ಸಂಸತ್ತಿನಲ್ಲಿ ಹಿರಿಯ ನಾಗರಿಕರ ಪರ ಮಾತಾದ ಜಯಾ ಬಚ್ಚನ್

ಭಾರತದ 65 ವಯಸ್ಸು ಮೀರಿದ ಹಿರಿಯ ನಾಗರಿಕರ ಸಂಖ್ಯೆಯು 40% ಮುಟ್ಟಿದ್ದು ಯುವ ಸಮುದಾಯದ ಪ್ರಮಾಣವನ್ನು ಮೀರಿಸಿದೆ. ಭಾರತದ ಹಿರಿಯರ ಸಂಖ್ಯೆಯು 55 ಕೋಟಿಗೂ ಹೆಚ್ಚು ಸುದ್ದಿ. ಅತ್ತ ಸಂಸತ್ತಿನಲ್ಲಿ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಮುಖ್ಯವಾದ ವಿಷಯವನ್ನು ಎತ್ತಿ, ಹಿರಿಯ ನಾಗರಿಕರನ್ನು ದಯಮಾಡಿ ಕೊಂದುಬಿಡಿ. ಸರ್ಕಾರ ಎಲ್ಲ 65 ಪ್ರಾಯ ದಾಟಿದ ಹಿರಿಯರನ್ನು ಕೊಲ್ಲಬೇಕು. ಏಕೆಂದರೆ ಈ ರಾಷ್ಟ್ರ ನಿರ್ಮಾಣಗಾರರ ಬಗ್ಗೆ ಗಮನ ಹರಿಸಲು ಸರ್ಕಾರ ಸಿದ್ಧವಾಗಿಲ್ಲ. ಭಾರತದಲ್ಲಿ

ನೆಲ್ಯಾಡಿ: ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

ನೆಲ್ಯಾಡಿ: ಸೀರೋ ಮಲಬಾರ್, ಮಲಂಕರ ಸಭೆ ಸೇರಿದಂತೆ ವಿವಿದ ಧರ್ಮ ಸಭೆಯ ಚರ್ಚ್ ಗಳಲ್ಲಿ ಲೋಕರಕ್ಷಕ, ಮಹಾನ್ ಮಾನವತಾವಾದಿ, ಸಹನೆ, ತ್ಯಾಗ ಮತ್ತು ಪ್ರೀತಿಯ ಮೂಲಕ ಲೋಕವನ್ನು ಗೆದ್ದ ಯೇಸು ಕ್ರಿಸ್ತರ ಯಾತನೆಯನ್ನು ನೆನಪಿಸುವ ಪಾಸ್ಕ ಕಾಲಕ್ಕೆ ಕ್ರೈಸ್ತರು ವಿವಿದ ಚರ್ಚ್ ಗಳಿಗೆ ತೆರಳಿ ಪೂಜಾರ್ಪಣೆಯಲ್ಲಿ ಬಾಗವಹಿಸಿ ಹಣೆಗೆ ಆಶೀರ್ವದಿಸಿದ ವಿಭೂತಿಯನ್ನು ಧರ್ಮ ಗುರುಗಳಿಂದ ಹಚ್ಚಿ ವ್ರತಾನುಷ್ಟಾನಕ್ಕೆ ಪ್ರವೇಶ ಪಡೆದರು. ಈ ದಿನದಿಂದ ಸಾಮಾನ್ಯವಾಗಿ ಕ್ರೈಸ್ತರು ಮಾಂಸ

ನೆಲ್ಯಾಡಿ: ಪಡುಬೆಟ್ಟು ಮಕ್ಕಳ ಯಕ್ಷಗಾನ ಮಂಡಳಿ ಉದ್ಘಾಟನೆ-ರಂಗಪ್ರವೇಶ

ನೆಲ್ಯಾಡಿ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಸಹಯೋಗದಲ್ಲಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ, ಗುರುವಂದನೆ, ಮಕ್ಕಳ ರಂಗಪ್ರವೇಶ ಕಾರ್ಯಕ್ರಮವು ದಂದು ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಂಗಮಂದಿರದಲ್ಲಿ ನಡೆಯಿತು.ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್

ಉಳ್ಳಾಲ:ರೈಲು ಢಿಕ್ಕಿ ಹೊಡೆದು ಯುವಕ ಸಾವು

ಉಳ್ಳಾಲ: ಫೆ.14 ರಂದು ಸೌದಿಗೆ ತೆರಳಬೇಕಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.ಉಚ್ಚಿಲ ರೈಲ್ವೇ ಗೇಟ್ ಸಮೀಪದ ಹಸೈನಾರ್ ಎಂಬವರ ಪುತ್ರ ಜಾಫರ್ (23) ಮೃತರು. ನಿನ್ನೆ ಸಂಜೆ ವೇಳೆ ಮನೆ ಕಡೆಗೆ ತೆರಳಲು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಿಂದ ಊರಿಗೆ

ಅಧಿಕಾರಿಗಳು ಒಂದೇ ವೇದಿಕೆ ಕುಳಿತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ : ಶಾಸಕಿ ಭಾಗೀರಥಿ ಮುರುಳ್ಯ

ಗ್ರಾಮದ ಜನರಿಗೆ ಸರಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟವಾಗುವ ಇಂತ ದಿನದಲ್ಲಿ ಗ್ರಾಮದ ಒಂದೇ ವೇದಿಕೆಯಲ್ಲಿ ಎಲ್ಲ ಅಧಿಕಾರಿಗಳು ಕುರಿತು ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ‌ ಬರೆದಿರುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.  ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಂಟೀ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ  ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಕಾಪು: ಟೆಂಪೊ ಪಲ್ಟಿ : ಸಂಚಾರ ಅಸ್ತವ್ಯಸ್ತ

ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಮಿನಿ ಗೂಡ್ಸ್ ಟೆಂಪೋವೊಂದು ಹೆದ್ದಾರಿಗೆ ಅಡ್ಡವಾಗಿ ಮಗುಚಿ ಬಿದ್ದ ಘಟನೆ ಕೊಪ್ಪಲಂಗಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಡ್ಡ ಬಿದ್ದಿದ್ದು ಇದರಿಂದಾಗಿ ಟೆಂಪೋದಲ್ಲಿದ್ದ ಸಾಮಾಗ್ರಿಗಳು ರಸ್ತೆಗೆ ಅಡ್ಡ ಬಿದ್ದಿವೆ. ಟೆಂಪೋ ಕೂಡ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು,