Home Archive by category Fresh News (Page 897)

ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ವರ್ಷದ ಶೈಕ್ಷಣಿಕ ಚಟುವಟಿಕೆಯ ಕುರಿತ ವಿಶೇಷ ಸಭೆ

ಕಾರ್ಕಳ ತಾಲೂಕು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ವರ್ಷದ ಶೈಕ್ಷಣಿಕ ಚಟುವಟಿಕೆಯ ಕುರಿತ ವಿಶೇಷ ಸಭೆಯ ನಡೆಯಿತು. ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಉಡುಪಿ ಇದರ ವಿದ್ಯಾಂಗ ಉಪನಿರ್ದೇಶಕರಾದ ಎನ್ ಎಚ್ ನಾಗೂರರವರು ವಹಿಸಿದ್ರು. ಇದೇ ವೇಳೆ ಮಾತನಾಡಿದ ಅವರು,

ನಟಿ ವಿನ್ನಿ ಫೆರ್ನಾಂಡೀಸ್ ಹೃದಯಘಾತದಿಂದ ನಿಧನ

ಚಲನಚಿತ್ರದ ಹಾಸ್ಯ ನಟಿ ವಿನ್ನಿ ಫೆರ್ನಾಂಡೀಸ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.ಅವರಿಗೆ 63 ವಯಸ್ಸಾಗಿತ್ತು. ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲಿ ನಟಿಸಿದರು.ಇವರು ರಾಜ್ಯೋತ್ಸವ ಪ್ರಶಸ್ತಿಯನ್ನ ಪಡೆದಿದ್ದಾರೆ. ಪತಿ ವಿನ್ಸೆಂಟ್,

ಮಂಗಳೂರು ಉತ್ತರ ರೋಟರಿ ವತಿಯಿಂದ ಯುವ ಸಾಧಕರಿಗೆ ಸನ್ಮಾನ

ಮಂಗಳೂರು ಉತ್ತರ ರೋಟರಿ ವತಿಯಿಂದ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಗರದ ಲೇಡಿಹಿಲ್‌ನ ರೋಟರಿ ಬಾಲಭವನದಲ್ಲಿ ನಡೆಯಿತು. ರೋಟರಿ ಮಾಜಿ ಗವರ್ನರ್ ಮೇಜರ್ ಡೊನೊರ್ ರಂಗನಾಥ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಪ್ರತಿಭೆಗಳಿಗೆ ಗೌರವಿಸಿದ್ರು. ವಿಜ್ಞಾನ ಮತ್ತು ತಾಂತ್ರಿಕತೆ ಕ್ಷೇತ್ರದಲ್ಲಿ ಸ್ವಸ್ತಿಕ್ ಪದ್ಮ, ಪವರ್ ಲಿಫ್ಟಿಂಗ್ ನಲ್ಲಿ ವೇನೇಝಿಯಾ ಆನ್ನಿ ಕಾರ್ಲೊ ಹಾಗೂ ಸುರೇಶ್ ಶೇಟ್ ,ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಅನುಷಾ ಜೇನ್ ಡಿಸೋಜ,

ಉಳ್ಳಾಲ ಹನಿಟ್ರಾಪ್ ಪ್ರಕರಣ : ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧನ

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರಾಪ್‌ಗೊಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ನಡೆದೆ ಸುದ್ದಿಗೋಷ್ಠಿಯಲ್ಲಿ ಅವರು, ಇನ್‌ಲ್ಯಾಂಡ್‌ಇಂಪಾಲ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತ ಪಕ್ಕದ ಮನೆಯ ವ್ಯಕ್ತಿಯೊಬ್ಬರನ್ನು ಪಾರ್ಟಿಯ ನೆಪದಲ್ಲಿ ಮದ್ಯದ ಜತೆ ಅಮಲು

ಬಂಟ್ವಾಳ: ಸೇತುವೆಯಲ್ಲಿ ಬೈಕನ್ನು ಚಾಲನೆ ಸ್ಥಿತಿಯಲ್ಲಿಯೇ ಇಟ್ಟು ಯವಕ ನಾಪತ್ತೆ

ಬೆಂಗಳೂರು ಮೂಲದ ಯುವಕನೋರ್ವ ಪಾಣೆಮಂಗಳೂರಿನ ಹೊಸ ಸೇತುವೆಯಲ್ಲಿ ಬೈಕನ್ನು ಚಾಲನೆ ಸ್ಥಿತಿಯಲ್ಲಿಯೇ ಇಟ್ಟು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸತ್ಯವೇಲು(29) ನಾಪತ್ತೆಯಾದ ಯವಕನಾಗಿದ್ದು ಬಂಟ್ವಾಳ ಪೊಲೀಸರು ಬೈಕನ್ನ ವಶಕ್ಕೆ ಪಡೆದುಕೊಂಡು ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈತ ಎರಡು ವಾರಗಳ ಹಿಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಬಂದಿದ್ದ. ಆದರೆ ಸ್ಥಳೀಯರು

ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಕಾಮಗಾರಿ ; ಮೀನು ಮಾರಾಟ ಮಹಿಳೆಯರ ಆಕ್ರೋಶ

ಮಂಗಳೂರಿನ ಹೊರವಲಯದ ಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಕಾಮಗಾರಿಯ ಹಿನ್ನಲೆ ಪಕ್ಕದಲ್ಲಿದ್ದ ಮೀನು ಮಾರುಕಟ್ಟೆಯ ಮೆಲ್ಚಾವಣಿಯನ್ನು ತೆಗದು ಮಾರುಕಟ್ಟೆಯನ್ನು ನೆಲಸಮ ಮಾಡಲು ಹೊರಟಿರುವುದು ಮೀನು ಮಾರಾಟ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೊಜಾರವರು 2 ವರ್ಷದ ಹಿಂದೆ ಎಂಎಲ್‌ಸಿಯಾಗಿದ್ದ ಸಂದರ್ಭ ಎನ್‌ಹೆಚ್ 66 ಬೈಕಂಪಾಡಿಯಲ್ಲಿ ಮೀನುಗಾರ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನುದಾನ ನೀಡಿ

ಪುತ್ತೂರಿನಲ್ಲಿ ಜಾನುವಾರುಗಳ ಏಲಂ ಪ್ರಕ್ರಿಯೆಗೆ ವಿರೋಧ

ಜುಲೈ.29ರಂದು 64 ಜಾನುವಾರುಗಳನ್ನು ಏಲಂ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ನಕಲಿ ರೈತರ ಹೆಸರಿನಲ್ಲಿ ಜಾನುವಾರುಗಳನ್ನು ಪಡೆದುಕೊಂಡು ಅವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುವ ಸಾಧ್ಯತೆಗಳಿವೆ. ಆದ ಕಾರಣ ಕೂಡಲೇ ಜಾನುವಾರುಗಳ ಏಲಂ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೆ. ಕೃಷ್ಣ ಪ್ರಸನ್ನ ಎಚ್ಚರಿಸಿದ್ದಾರೆ. ಪುತ್ತೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನುವಾರುಗಳ ಏಲಂ

ಬಾಲಕಿ ಜತೆ ಮೊಬೈಲ್ ಮೂಲಕ ಅನುಚಿತ ವರ್ತನೆ : ಪೊಲೀಸ್ ಸಿಬ್ಬಂದಿಯ ಬಂಧನ

ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಮೊಬೈಲ್  ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನೀಡಲಾದ ದೂರಿನ ಮೇರೆಗೆ ಮಂಗಳೂರು ನಗರ ಠಾಣೆಯೊಂದರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಈ ಕುರಿತು ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ನಗರದ ಪೊಲೀಸ್ ಠಾಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೋಷಕರ ಜತೆ ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್ ಸಂಖ್ಯೆಯನ್ನು

ಭಾರತ್ ಸ್ಕೌಟ್ ಆಂಡ್ ಗೈಡ್ಸ್ ತಂಡದಿಂದ ಸೇವಾ ಕಾರ್ಯ: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ

ಕೋರೋನಾ ಭೀತಿಯ ನಡುವೆಯೂ ಮತ್ತೆ ಎಸೆಸೆಲ್ಸಿ ಪರೀಕ್ಷೆ ಕರ್ನಾಟಕದಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಯಶಸ್ವಿನ ಹಿಂದೆ ಶಿಕ್ಷಣ ಇಲಾಖೆ ಜೊತೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದೆ. ಈ ಪೈಕಿ ಪ್ರಮುಖ ಪಾತ್ರ ವಹಿಸಿ, ಪರೀಕ್ಷೆ ಸುಸೂತ್ರವಾಗಿ ನಡೆಯಲು ಕಾರಣವಾದವರ ಪೈಕಿ ಈ ತಂಡದ ಪ್ರಯತ್ನ ಕೂಡಾ ಪ್ರಶಂಸಾರ್ಹ. ಅಷ್ಟಕ್ಕೂ ಆ ತಂಡ ಯಾವುದು? ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅವರು ಮಾಡಿದ ಸೇವೆ ಏನು? ಬನ್ನಿ ನೋಡೋಣ ನೀಲಿ ಬಣ್ಣದ ಸಮವಸ್ತ್ರ, ತಲೆಗೊಂದು ಟೋಪಿ

ಸೈಕಲ್‌ಗೆ ಢಿಕ್ಕಿಯಾದ ಕಾರು: ಸೈಕಲ್ ಸವಾರ ಸಾವು

ಕುಂದಾಪುರ: ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ಢಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ನಡೆದಿದೆ. ಹೆಮ್ಮಾಡಿಯ ಸಂತೋಷನಗರ ನಿವಾಸಿ ರಾಮ ಕುಲಾಲ್(60) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.ರಾಮ ಕುಲಾಲ್ ಅವರು ಹೆಮ್ಮಾಡಿಯಿಂದ ತಮ್ಮ ಸೈಕಲ್ ನಲ್ಲಿ ತಲ್ಲೂರಿಗೆ ತೆರಳುತ್ತಿರುವ ಹೊತ್ತಿಗೆ ಈ ಅಪಘಾತ ನಡೆದಿದೆ. ಸೈಕಲ್ ಡಿವೈಡರ್