Home Archive by category Fresh News (Page 92)

ನೆಲ್ಯಾಡಿ: ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ; ತೀವ್ರ ಗಾಯಗೊಂಡ ಬೈಕ್ ಸವಾರ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ, ತೀವ್ರ ಗಾಯಗೊಂಡ ಬೈಕ್ ಸವಾರ. ಸ್ಕೂಟರ್‌ ಸವಾರ ಶೇಖಬ್ಬ ಎಂಬವರು KA19HL2146 ನೋಂದಣಿ ನಂಬ್ರದ ಸ್ಕೂಟರನ್ನು ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಮಂಗಳೂರು – ಬೆಂಗಳೂರು

ಮಂಗಳೂರು ಸಿಸಿಬಿ ಡಿವೈಎಸ್‌ಪಿ ಪರಮೇಶ್ವರ ಉಡುಪಿಗೆ ಬಡ್ತಿ

ಪರಮೇಶ್ವರ ಅನಂತ ಹೆಗ್ಡೆ ಅವರನ್ನು ಉಡುಪಿಯ ಎರಡನೆಯ ಹೆಚ್ಚುವರಿ ಪೋಲೀಸು ಆಯುಕ್ತರಾಗಿ ನೇಮಕ ಮಾಡಲಾಗಿದೆ.ಮಂಗಳೂರಿನ ಸಿಸಿಬಿ- ಅಪರಾಧ ಪತ್ತೆ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಪರಮೇಶ್ವರ ಅವರಿಗೆ ಬಡ್ತಿ ಸಿಕ್ಕಿದೆ.1994ರಲ್ಲಿ ಎಸ್‌ಐ ಆಗಿ ಪರಮೇಶ್ವರ ಅವರು ಪೋಲೀಸು ಇಲಾಖೆಗೆ ಸೇರಿದ್ದರು. ಉಡುಪಿಯಲ್ಲಿ ಈಗಾಗಲೇ ಒಬ್ಬರು ಹೆಚ್ಚುವರಿ ಪೋಲೀಸು ಕಮಿಶನರ್ ಇದ್ದು, ಎರಡನೆಯ ಹೆಚ್ಚುವರಿ ಪೋಲೀಸು ಕಮಿಶನರ್ ಆಗಿ ಪರಮೇಶ್ವರ ಅವರು ಸೇರ್ಪಡೆ ಆಗಿದ್ದಾರೆ.

ಹಾಸನ ; ಅಪಹರಣ ಮಾಡಿದವರಿಂದ ಶಿಕ್ಷಕಿ ಅರ್ಪಿತ ಬಿಡುಗಡೆ

ಹಾಸನದಲ್ಲಿ ನಿನ್ನೆ ಕಾಸಗಿ ಶಾಲೆಯ ಶಿಕ್ಷಕಿಯನ್ನು ಅಪಹರಿಸಿದ್ದ ತಂಡವನ್ನು ಬೆನ್ನಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಅಡ್ಡ ಹಾಕಿದ ಪೋಲೀಸರು ಶಿಕ್ಷಕಿ ಅರ್ಪಿತಳನ್ನು ಗಂಡಾಂತರದಿಂದ ಪಾರು ಮಾಡಿದರು. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಅರ್ಪಿತ ಟೀಚರಾಗಿ ದುಡಿಯುತ್ತಿದ್ದಳು. ಸಂಬಂಧಿಕರಾದ ರಾಮು ಮನೆಯವರು ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ರಾಪ ಮುಂದಿಟ್ಟಿದ್ದರು. ಆದರೆ ಅರ್ಪಿತ ಒಪ್ಪಿರಲಿಲ್ಲ. ಆದ್ದರಿಂದ ರಾಮು ಮತ್ತು ತಂಡದವರು ಆಕೆಯನ್ನು ಶಾಲೆಯ

ಪುತ್ತೂರಿನ ಜೋಸ್ ಆಲುಕಾಸ್ ಗೆ ಐದನೇ ವರ್ಷದ ಸಂಭ್ರಮ

ಜೋಸ್ ಆಲುಕಾಸ್… ಚಿನ್ನಾಭರಣ ಸಂಸ್ಥೆಗಳ ಪೈಕಿ ಹೆಸರುವಾಸಿಯಾಗಿರುವ ಪ್ರತಿಷ್ಟಿತ ಅಂತರಾಷ್ಟ್ರೀಯ ಚಿನ್ನಾಭರಣ ಮಳಿಗೆ.. ಪುತ್ತೂರಿನ ಕೆಎಸ್ ಆರ್ ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸ್ತಾ ಇರೋ ಈ ಸಂಸ್ಥೆ ಈಗಾಗಲೇ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿದ್ದು ಇದೀಗ ಸಂಸ್ಥೆಗೆ 5ವರ್ಷಗಳ ಸಂಭ್ರಮಾಚರಣೆ.‌ ಹಾಗಾಗಿ ಮಳಿಗೆಯಲ್ಲಿ ಡಿ.2ರಿಂದ ಸುವರ್ಣ ವರ್ಷ @5 ವಾರ್ಷಿಕ ಆಚರಣೆಗಳು ಪ್ರಾರಂಭವಾಗಲಿದೆ.. ಈ ಸಂಭ್ರಮಾಚರಣೆಯ ಪ್ರಯುಕ್ತ ರೂ. 50000

ಡಿ.3ರಂದು ಪುತ್ತೂರಿನಲ್ಲಿ ‘ನಾರಿ ಶಕ್ತಿ ಸಂಗಮ’

ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಸಹಯೋಗದಲ್ಲಿ ‘ನಾರೀ ಶಕ್ತಿ ಸಂಗಮ’ ಇದೇ ಡಿಸೆಂಬರ್ 3ರಂದು ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯದ ಸಂಚಾಲಕಿ ರೂಪಲೇಖ ಹೇಳಿದ್ರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವ್ರು, ‘ನಾರಿ ಶಕ್ತಿ ಸಂಗಮ’ ಸಮ್ಮೇಳನವನ್ನ ಮುಖ್ಯವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗಿದೆ. ಸುಮಾರು 1000

ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023

ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ, ದಾನವರ ವೇಶ ಭೂಷಣ, ಯಕ್ಷಗಾನದ ಸಾಂಪ್ರದಾಯಕ ಹೆಜ್ಜೆ, ಮಾತು, ರಂಗಸ್ಥಳ ಸಂಪ್ರದಾಯದಿಂದ ನಡೆಯುವ

ವಿಟ್ಲ: ಚಾಲಕನ ನಿಯಂತ್ರ ತಪ್ಪಿ ಕೋಳಿ ಸಾಗಾಟದ ಲಾರಿ ಪಲ್ಟಿ

ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕೋಳಿ ಸಾಗಾಟದ ಲಾರಿ ರಸ್ತೆಗೆ ಪಲ್ಟಿ ಹೊಡೆದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ರಾಧಾಕಟ್ಟೆ ಎಂಬಲ್ಲಿ ನಡೆದಿದೆ.ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಚಲಿಸುತ್ತಿದ್ದ ರಸ್ತೆಗೆ ಉರುಳಿದೆ. ಘಟನೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕೋಳಿಗಳು ರಸ್ತೆಗೆ ಉರುಳಿ ಬಿದ್ದಿದ್ದು, ಅದನ್ನು ಬೇರೆ ವಾಹನಕ್ಕೆ ತುಂಬಿಸಲಾಗಿದೆ.

ಸೀತಾನದಿಯಲ್ಲಿ ಕಳೆದುಹೋಗಿದ್ದ ಚಿನ್ನದ ಸರ ಹುಡುಕಿಕೊಟ್ಟ ಈಶ್ವರ್ ಮಲ್ಪೆ

ಉಡುಪಿ ಜಿಲ್ಲೆಯ ಪರ್ಕಳದ ಪೆರ್ಣಂಕಿಲ ಸಮೀಪದಲ್ಲಿರುವ ಸೀತಾನದಿಯಲ್ಲಿ ಎರಡು ದಿನದ ಹಿಂದೆ ಈಜಲು ಹೋಗಿದ್ದ ಮಲ್ಪೆಯ ಕೊಪ್ಪಲತೋಟ ನಿವಾಸಿ ಕಿಶನ್ ಕೋಟ್ಯಾನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಮೂರು ಲಕ್ಷ ಮೌಲ್ಯದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಆ ನಂತರ ನುರಿತ ಈಜುಪಟುಗಳಿಂದ ಹುಡುಕಾಟ ನಡೆಸಿಯೂ ಆ ಚಿನ್ನದ ಸರ ಸಿಕ್ಕಿರಲಿಲ್ಲ. ಈ ಘಟನೆ ನಡೆದು ಎರಡು ದಿನದ ಬಳಿಕ ಮುಳುಗುತಜ್ನ ಈಶ್ವರ್ ಮಲ್ಪೆಯವರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಕಾರ್ಯ

ಕುಂದಾಪುರ: ಕಾರು-ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು

ಕುಂದಾಪುರ ತಾಲೂಕಿನ ಹೆಮ್ಮಾಡಿ ಹಾಲು ಡೈರಿ ಬಳಿ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಜಯದುರ್ಗಾ ಬಸ್ ಚಾಲಕ ಮಾಬಲ ತೋಪ್ಲು ಅವರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಎಂದಿನಂತೆ ಬಸ್ ಡ್ರೈವರ್ ಕೆಲಸವನ್ನು ನಿರ್ವಹಿಸಿ ಬಸ್ ನ್ನು ನೂಜಾಡಿ ಸ್ಟಾಪ್ ನಲ್ಲಿ ನಿಲ್ಲಿಸಿ ಬೈಕ್ ನಿಂದ ಹೆಮ್ಮಾಡಿ ಯಿಂದ ತೋಪ್ಲುಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ಹಾಲು ಡೈರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದು ಕೊಳ್ಳುತ್ತಿದ್ದ ಸಮಯದಲ್ಲಿ ಮುಳ್ಳಿಕಟ್ಟೆ

ಪಡುಬಿದ್ರಿ: ಸೇವೆಯಿಂದ ನಿವೃತ್ತಿಗೊಂಡ ಪಡುಬಿದ್ರಿ ಎಎಸ್ಸೈ ದಿವಾಕರ್ ಸುವರ್ಣ ಅವರಿಗೆ ಬೀಳ್ಕೊಡುಗೆ

ಬಹಳಷ್ಟು ವರ್ಷಗಳಿಂದ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಎಎಸ್ಸೈ ದಿವಾಕರ್ ಸುವರ್ಣ ವಯೋ ಸಹಜ ನಿವೃತ್ತಿ ನಮಗೆ ತುಂಬಲಾರದ ನಷ್ಟ ಎಂಬುದಾಗಿ ಪಡುಬಿದ್ರಿ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್. ಬಹಳ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸರಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನಿನ ವಿಚಾರದಲ್ಲಿ ಯಾರೂ ಪರಿಪೂರ್ಣರಲ್ಲ ನಿಮ್ಮೊಂದಿಗೆ ಸೇವೆ