Home Archive by category Fresh News (Page 91)

ತೆಲಂಗಾಣದ ಎರಡನೆಯ ಮುಖ್ಯಮಂತ್ರಿ ಎನುಮುಲ ರೇವಂತ್ ರೆಡ್ಡಿ ಅಧಿಕಾರ ಸ್ವೀಕಾರ

ತೆಲಂಗಾಣ ರಾಜ್ಯವಾದ ಬಳಿಕ ಕಾಂಗ್ರೆಸ್ ಪಕ್ಷದ ಮೊದಲ ಮತ್ತು ಆ ರಾಜ್ಯದ ಎರಡನೆಯ ಮುಖ್ಯಮಂತ್ರಿಯಾಗಿ ಎನುಮುಲ ರೇವಂತ್ ರೆಡ್ಡಿಯವರು ಉಪ ಮುಖ್ಯಮಂತ್ರಿ ಮತ್ತು 11 ಮಂತ್ರಿಗಳ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಲಾಲ್ ಬಹದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ತೆಲಂಗಾಣದ ಉಪ

ಮೂಲ್ಕಿ: ಲಾರಿ ಚಾಲಕನ ಮಹಾ ಯಡವಟ್ಟು..!!

ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿ ಡಿವೈಡರ್ ಮೇಲೆ ಹತ್ತಿ ಪಾದಚಾರಿ ಮಾರ್ಗದ ಪಕ್ಕದಲ್ಲಿದ್ದ ವಾಹನಗಳಿಗೆ ಡಿಕ್ಕಿಯಾದ ಘಟನೆ ರಾ. ಹೆದ್ದಾರಿ 66 ರ ಮೂಲ್ಕಿ ಜಂಕ್ಷನ್ ಬಳಿ ನಡೆದಿದೆ.ಲಾರಿ ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಘಟನೆಯ ಪರಿಣಾಮ ಸಂಚಾರ ಪೆÇಲೀಸ್ ಸಿಬ್ಬಂದಿ ಸೇರಿ ಮೂವರು ಗಾಯಗೊಂಡಿದ್ದಾರೆ. ಸ್ಕೂಟರ್ ಸವಾರ, ಬಪ್ಪನಾಡು ಬಳಿಯ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್, ಉತ್ತರ ಕರ್ನಾಟಕ ಮೂಲದ ಗಂಭೀರ ಗಾಯಗೊಂಡು

ಕಾಸರಗೋಡು: ನೀರ್ಚಾಲು ಪೆರಡಾಲ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನೆ

ಕಾಸರಗೋಡಿನ ನೀರ್ಚಾಲು ಪೆರಡಾಲದ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜೈ ತುಲುನಾಡ್ ಸಂಘಟನೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಜೊತೆ ಸೇರಿಕೊಂಡು ಮಹಾಜನ ಸಂಸ್ಕೃತ ಕಾಲೇಜ್ ನೀರ್ಚಾಲುವಿನ ಆಶ್ರಯದಲ್ಲಿ ‘ಬಲೆ ತುಲು ಲಿಪಿ ಕಲ್ಪುಗ’ ತರಗತಿಯು ಉದ್ಘಾಟನೆಗೊಂಡಿತ್ತು. ಹಿರಿಯರೂ, ಶಾಲಾ ಮೆನೇಜರ್ ಜಯದೇವ ಖಂಡಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಂಗಳೂರು: ಡಿ.10 ರಂದು ಕೀರ್ತಿಶೇಷ ಕುಂಬ್ಳೆ ಸುಂದರರಾವ್ ಸಂಸ್ಮರಣಾ ಕಾರ್ಯಕ್ರಮ

ಯಕ್ಷಲೋಕ ವಿಖ್ಯಾತ, ಮಾತಿನ ರಂಗದ ಮಹಾರಥಿ, ಹಿರಿಯ ಯಕ್ಷಗಾನ ಕಲಾವಿದರು, ಸುರತ್ಕಲ್ ಕ್ಷೇತ್ರದ ಶಾಸಕರು, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಟಿತ ಪುರಸ್ಕಾರವನ್ನು ಪಡೆದ ಕುಂಬ್ಳೆ ಸುಂದರರಾವ್‌ರವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಡಿಸೆಂಬರ್ ೧೦, ೨೦೨೩ನೇ ಆದಿತ್ಯವಾರ ಸಾಯಂಕಾಲ ೪.೦೦ರಿಂದ ದೇವಾಂಗ ಸಭಾಭವನ, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯಲಿರುವುದು.

ದೇಶದೊಳಗಿನ ಸೈನಿಕರೇ ಗೃಹರಕ್ಷಕರು

ಗೃಹರಕ್ಷಕ ದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರವಾದ ಶಿಸ್ತುಬದ್ಧವಾದ ಸಮವಸ್ರದಾರಿ ಸ್ವಯಂಸೇವಕರ ಸೇವಾ ಸಂಸ್ಥೆ ಆಗಿರುತ್ತದೆ. ‘ನಿಷ್ಕಾಮ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಜೀವದ ರಕ್ಷಣೆ ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು. ಹೇಗೆ ದೇಶದ ಗಡಿಗಳಲ್ಲಿ ಸೈನಿಕರು ನಮ್ಮ ದೇಶವನ್ನು ವೈರಿಗಳಿಂದ ಮತ್ತು

ಮಂಗಳೂರು: ಡಿ.9ರಂದು ಬಿಎಂಆರ್ ಗ್ರೂಪ್‌ನಿಂದ 2ನೇ ತಿಂಗಳ ಡ್ರಾ

ಬಿಎಂಆರ್ ಗ್ರೂಪ್ ವತಿಯಿಂದ ಎರಡನೇ ತಿಂಗಳ ಡ್ರಾ ಕಾರ್ಯಕ್ರಮವು ಡಿಸೆಂಬರ್ 9ರಂದು ಕೃಷ್ಣಾಪುರದ ಬಿಎಂಆರ್ ಕಚೇರಿಯಲ್ಲಿ ನಡೆಯಲಿದೆ. ಅದೃಷ್ಟ ಶಾಲಿಗಳಿಗೆ ಆರು ಬಂಪರ್ ಪ್ರೆöÊಸ್ ಗೆಲ್ಲುವ ಅವಕಾಶವಿದ್ದು, ಮೂವರಿಗೆ 75 ಸಾವಿರ ಮೌಲ್ಯದ ಚಿನ್ನದ ನೆಕ್ಲಿಸ್ ಹಾಗೂ ಮೂವರಿಗೆ ಹೋಂಡಾ ಆಕ್ಟಿವಾ ಬಹುಮಾನವಾಗಿ ಗೆಲ್ಲುವ ಅವಕಾಶವಿದೆ. ಡಿಸೆಂಬರ್ 5ರೊಳಗೆ ಹಣ ಪಾವತಿಸಿದವರಿಗೆ 25 ಚಿನ್ನದ ಉಂಗುರ ಮತ್ತು 50 ಮಂದಿಗೆ ಸರ್ಪ್ರೈಸ್ ಬಹುಮಾನ ಗೆಲ್ಲುವ ಅವಕಾಶವಿದೆ. ಹೆಚ್ಚಿನ

ಕೋಲ ಕಟ್ಟುವ ಸಮುದಾಯವರಿಗೆ ಇನ್ನೂ ಸಿಗದ ಮೀಸಲಿಟ್ಟ ಭೂಮಿ

ಕರಾವಳಿಯ ದೈವಾರಾಧನೆಯ ಭಾಗವಾಗಿರುವ ಕೋಲವನ್ನು ಕಟ್ಟುವ ಸಮುದಾಯದವರಿಗಾಗಿ ಮೀಸಲಿಟ್ಟ ಭೂಮಿ ಇದುವರೆಗೂ ಅವರಿಗೆ ದೊರೆತಿಲ್ಲ. ನಿವೇಶನರಹಿತರ ಹೆಸರಿನಲ್ಲಿ ಸರಕಾರದಿಂದ ಮಂಜೂರಾದ ಜಾಗದ ಅಭಿವೃದ್ಧಿಗಾಗಿ ಸರಕಾರ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರೂ ಕೂಡ ಇದುವರೆಗೂ ಒಂದು ರೂಪಾಯಿ ಕೂಡ ಸೂಕ್ತ ವಿನಿಯೋಗವಾಗಿಲ್ಲ.. ಹೌದು ನಾವು ಹೇಳುತ್ತಿರುವುದು ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯ ಕರ್ಮಕಾಂಡವನ್ನು. 2017ರಲ್ಲಿ

ಕಾರ್ಕಳ: ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ

ಭಾರತ ರತ್ನ ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿ ನಿರ್ವಾಣ ದಿನವಾದ ಇಂದು ಕಾರ್ಕಳ ತಾಲೂಕು ಕಚೇರಿ ಬಳಿ ಇರುವ ಪ್ರತಿಮೆಗೆ ದಂಡಾಧಿಕಾರಿ ನರಸಪ್ಪ ರವರು ಪ್ರತಿಭೆಗೆ ಮಾಲಾರ್ಪಣೆ ಮತ್ತು ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾನತೆಯ ಹರಿಕಾರ. ಇಂದು ಅವರ ಮಹಾ ಪರಿನಿರ್ವಾಣದ ದಿನಾಚರಣೆಯನ್ನು ದೇಶದ ಎಲ್ಲಾ ಕಡೆ ಆಚರಿಸುತ್ತಿದ್ದಾರೆ. ಅಂಬೇಡ್ಕರ್‍ರವರ ವಿಚಾರಧಾರೆಗಳು ದೇಶಕ್ಕೆ

ಬ್ರಹ್ಮಾವರ : ಕರಾವಳಿಗೆ ಮಾದರಿಯಾದ ಎಳ್ಳಂಪಳ್ಳಿ ಕಿಂಡಿ ಅಣೆಕಟ್ಟು ತುಂಬಿತುಳುಕುವಷ್ಟು ನೀರು ಶೇಖರಣೆ

ಬ್ರಹ್ಮಾವರ : ನೀಲಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಎಳ್ಳಂಪಳ್ಳಿ ಮತ್ತು ಕಾಡೂರು ನಡುವೆ ಹರಿಯುವ ಸೀತಾನದಿಗೆ ಕಳೆದ ವರ್ಷ ಮೆಟಲ್ ಡೋರ್ ಅಳವಡಿಸಿ ಮಾಡಲಾದ ಕಿಂಡಿ ಅಣೆಕಟ್ಟು ಯಶಸ್ಸು ಕಂಡಿದೆ. ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಜೀವ ನದಿಗಳು ಇದ್ದರೂ ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಬರ ಇದ್ದ ಕಾರಣ ಸಿಹಿ ನೀರಿನ ನದಿಗಳಿಗೆ ಮರದ ಮತ್ತು ಫೈಭರ್‍ನ ಕಿಂಡಿ ಅಣೆಕಟ್ಟಿನಿಂದ ನೀರು ಸೋರುವ ಸಮಸ್ಯೆಗೆ ಎಳ್ಳಂಪಳ್ಳಿ ಡ್ಯಾಂ ರೈತರ ಮತ್ತು ಕುಡಿಯುವ ನೀರಿನ

ಮಂಜೇಶ್ವರ : ವ್ಯಕ್ತಿಯೋರ್ವ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಅಜ್ಞಾತ ಮಧ್ಯ ವಯಸ್ಕನೊಬ್ಬ ರೈಲ್ವೇ ಹಳಿಯ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸುಮಾರು 55 ವರ್ಷ ಪ್ರಾಯವಿರುವ ಈತ ಎರಡು ದಿವಸಕ್ಕೆ ಮೊದಲು ಗಡಿ ಪ್ರದೇಶವಾದ ತಲಪಾಡಿಯಲ್ಲಿ ಮಲಯಾಳ ಭಾಷೆಯಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡ ರೀತಿಯಲ್ಲಿ ಮಾತನಾಡುತ್ತಿದ್ದನೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಈತನ ಕ್ರೆಯಲ್ಲಿ ಮನೋಹರ್ ಎಂದು ಬರೆಯಲಾಗಿದೆ. ಮಾಹಿತಿ ಅರಿತು ಸ್ಥಳಕ್ಕೆ ಸಮಾಜ