Home Archive by category mangaluru (Page 15)

ಮಂಗಳೂರು ವಿ. ವಿ. ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾಗಿ ಯೋಗೀಶ್ ಕೈರೋಡಿ ಆರಂಬೋಡಿ ಆಯ್ಕೆ

ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕೈರೋಡಿ ನಿವಾಸಿ ಲೇಖಕ ಡಾ. ಯೋಗೀಶ್ ಕೈರೋಡಿ ಇವರನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ‌ ಪೀಠದ ಸಲಹಾ ಸಮಿತಿಗೆ ಸರಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಮಂಗಳೂರು : ದ.ಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರವಿರಾಜ ಹೆಗ್ಡೆ ಕೊಡವೂರು, ಉಪಾಧ್ಯಕ್ಷರಾಗಿ ಉದಯ್ ಎಸ್. ಕೋಟ್ಯಾನ್ ಅವಿರೋಧ ಆಯ್ಕೆ

ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ರಿಟರ್ನಿಂಗ್ ಅಧಿಕಾರಿಯಾದ ರಾಜು ಬಿ. ಇವರು ಚುನಾವಣೆ ಪ್ರಕ್ರಿಯೆ ನಡೆಸಿರುತ್ತಾರೆ. ಶ್ರೀ. ರವಿರಾಜ ಹೆಗ್ಡೆ ಕೊಡವೂರು ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹಾಗೂ ಶ್ರೀ ಉದಯ್ ಎಸ್. ಕೋಟ್ಯಾನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಶ್ರೀ ರವಿರಾಜ ಹೆಗ್ಡೆಯವರು 2009-2014, 2014-2019 ಹಾಗೂ 2019-2022 ಅವಧಿಯಲ್ಲಿ ದ.ಕ. ಹಾಲು

ತೊಕ್ಕೊಟ್ಟು : ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳ

ನಗರದ ತೊಕ್ಕೊಟ್ಟುವಿನಲ್ಲಿರುವ ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳವನ್ನು ಆಯೋಜಿಸಲಾಗಿದೆ. ಉತ್ತಮ ಪವರ್ ಹಾಗೂ ಅತ್ಯಧಿಕ ಮೈಲೇಜ್ ಹೊಂದಿರುವ 125ಸಿಸಿ ಸ್ಕೂಟರನ್ನು ಕೇವಲ 999 ರೂ. ಡೌನ್ ಪೇಮೆಂಟ್ ನೀಡಿ ಖರೀದಿಸಬಹುದು. ಮೋಟರ್ ಬೈಕ್ ಮೇಲೆ ರೂ.2000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.1000 ಕ್ಯಾಶ್‌ಬ್ಯಾಕ್, ಹಾಗೂ ಹೆಲ್ಮೆಟ್ ಹಾಗೂ ಟೀ-ಶರ್ಟ್ ಉಚಿತವಾಗಿ ನೀಡಲಾಗುತ್ತದೆ. ಮೋಟಾರ್ ಸ್ಕೂಟರ್ ಮೇಲೆ ರೂ.3000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.1000

ಮಂಗಳೂರು: ಎ.19 ರಂದು ರೋಹನ್ ಇಥೋಸ್ ಭೂಮಿಪೂಜೆ

ಅತ್ಯುತ್ತಮ ಗುಣಮಟ್ಟ ಮತ್ತು ಸೇವಾಬದ್ಧತೆಯೊಂದಿಗೆ ಕಳೆದ 32 ವರ್ಷಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿಸುವ ಪ್ರತಿಷ್ಠಿತ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಎಪ್ರಿಲ್ 19ರಂದು ಕಂಕನಾಡಿಯ ಫಾದರ್ ಮುಲ್ಲರ್ ಬಳಿ ನಡೆಯಲಿದೆ. ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಈ ಯೋಜನೆಯು 15 ಮಹಡಿಗಳನ್ನು ಹೊಂದಿದ್ದು, ಪ್ರತಿ

ಮಂಗಳೂರು: ಅಸ್ತ್ರಗ್ರೂಪ್ ವತಿಯಿಂದ ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕೊಡೆ ಹಸ್ತಾಂತರ

ಅಸ್ತ್ರಗ್ರೂಪ್ ವತಿಯಿಂದ ಮಂಗಳೂರು ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಲಾಯಿತು. ಸಾಮಾಜಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಗಳನ್ನು ನೀಡುತ್ತಿರುವ ಅಸ್ತ್ರಗ್ರೂಪ್ ವತಿಯಿಂದ ಟ್ರಾಫಿಕ್ ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು ಸುಮಾರು 300 ಕೊಡೆಗಳನ್ನು ಮಂಗಳೂರಿನ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಸ್ತ್ರಗ್ರೂಪ್‌ನ ಸಿಇಒ ಲಂಚುಲಾಲ್ ಮತ್ತು ಯತೀಶ್ ಪೂಜಾರಿ ಅವರು

ದ್ವಿತೀಯ ಪಿಯುಸಿ ಫಲಿತಾಂಶ – ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಮಿಸಾಂ ಆತೀರ ಖಾನ್ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ 8ನೇ ರ್‍ಯಾಂಕ್

ಕಣಚೂರು ಮಹಿಳಾ ಪದವಿಪೂರ್ವ ಕಾಲೇಜು ದೇರಳಕಟ್ಟೆ ಇದರ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 97 ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 198 ವಿದ್ಯಾರ್ಥಿನಿಯರಲ್ಲಿ 45 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ, 133 ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 27 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಿಸಾಂ ಆತೀರ

2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ – ದ.ಕ ಜಿಲ್ಲೆಯ ಅಮೂಲ್ಯ ಕಾಮತ್, ದೀಪಶ್ರೀ ರಾಜ್ಯಕ್ಕೆ ಪ್ರಥಮ

2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಆದರಂತೆ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಲ್ಪಡುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕೆ ಪ್ರಕಟವಾಗಿದೆ. ಬೆಂಗಳೂರಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ 2024-25ನೇ ಸಾಲಿನ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು

ಮಂಗಳೂರು : ದ್ವಿತೀಯ ಪಿಯು ಫಲಿತಾಂಶ ಪ್ರಕಟ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ

ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದ ದ್ವಿತೀಯ ಪಿಯು (ಪೂರ್ವ ವಿಶ್ವವಿದ್ಯಾಲಯ) ಪರೀಕ್ಷೆಗಳ ಫಲಿತಾಂಶಗಳನ್ನು ಮಂಗಳವಾರ, ಏಪ್ರಿಲ್ 8 ರಂದು ಪ್ರಕಟಿಸಲಾಯಿತು. ಕರ್ನಾಟಕ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶಗಳನ್ನು ಪ್ರಕಟಿಸಿತು. ಉಡುಪಿ ಜಿಲ್ಲೆ ಶೇ. 93.90 ರಷ್ಟು ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಶೇ. 93.57 ರಷ್ಟು ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮಂಗಳೂರು: ತುಳು ಮತ್ತು ಕನ್ನಡ ರಂಗಭೂಮಿ ಕಲಾವಿದ ಸುರೇಶ್ ವಿಟ್ಲ ನಿಧನ

ತುಳು ರಂಗ ಭೂಮಿ ಹಾಗೂ ಶಾರದಾ ಆರ್ಟ್ಸ್ ಮಂಜೇಶ್ವರದ ಕಲಾವಿದ ಸುರೇಶ್ ವಿಟ್ಲ ನಿಧನ ಹೊಂದಿದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಶಾರದ ಆರ್ಟ್ಸ್ ಮಂಜೇಶ್ವರ ತಂಡದ ಬಹು ಬೇಡಿಕೆಯ ಕಲಾವಿದರಾದ ಇವರು ತುಳು ಕನ್ನಡ ರಂಗಭೂಮಿಯ ಮೂಲಕ ತನ್ನ ಅಭಿನಯ