ಕೆದಂಬಾಡಿ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು; ನಾವು ಸುಳ್ಳು ಹೇಳಲಿಲ್ಲ, ಪೊಳ್ಳು ಭರವಸೆ ಕೊಟ್ಟಿಲ್ಲ ಚುನಾವಣೆಯ ಸಂದರ್ಭದಲ್ಲಿ ಏನು ಗ್ಯಾರಂಟಿ ಕೊಟ್ಟಿದ್ದೇವೆಯೋ ಅದನ್ನು ಪಾಲನೆ ಮಾಡಿದ್ದೇವೆ ,ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ‌ನಮ್ಮನ್ನು ಬೆಂಬಲಿಸಿ‌ ಎಂದು ಶಾಸಕರಾದ ಅಶೋಕ್ ರೈ ಮನವಿ ಮಾಡಿದರು.

ಕೆದಂಬಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸಮಾಜವನ್ನು ಒಡೆದು ಅಧಿಜಾರಕ್ಕೇರುವ ಬಿಜೆಪಿ ವ್ಯಾಮೋಹ ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.‌ನಾವು ನಮ್ಮೊಳಗೆ ಕಚ್ಚಾಟ ಮಾಡುತ್ತಿದ್ದರೆ ನಮ್ಮ ವೈರಿಗಳು ನಮ್ಮ‌ಮೇಲೆ ದಾಳಿ ನಡೆಸುವ ಸಂಭವ ಇದೆ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.

ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ .‌ಈ‌ದೇಶದ ಶಾಂತಿ, ಸೌಹಾರ್ಧತೆ ಮತ್ತು ಸಮಾನತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.‌ಬೆಂಕಿ ಕೊಡುವುದು ಸುಲಭ ಆದರೆ ಅದನ್ನುಅರಗಿಸಲು ಕಷ್ಟ ಎಂಬುದನ್ನು ತಿಳಿದುಕೊಳ್ಳಬೇಕು‌ ಎಂದು ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರನ್ನು ಬೆಂಬಲಿಸುವಂತೆ ಮನವಿ‌ ಮಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ‌ಬಿ ವಿಶ್ವನಾಥ ರೈ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ‌ಶೆಟ್ಟಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ , ಉಸ್ತುವಾರಿಗಳಾದ ದುರ್ಗಾಪ್ರಸಾದ್ ರೈ ಕುಂಬ್ರ, ಮುರಳೀದರ್ ರೈ ಮಟಂತಬೆಟ್ಟು, ಮೆಲ್ವಿನ್ ಮೊಂತೆರೋ, ಬೋಳೋಡಿ‌ಚಂದ್ರಹಾಸ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಸೋಮಯ್ಯ ಕೆದಂಬಾಡಿ, ವಲಯಾಧ್ಯಕ್ಣರಾದ ಪುರಂದರ್ ರೈ ಕೋರಿಕ್ಕಾರ್ ,ಹಬೀಬ್‌ಕಣ್ಣೂರು, ಕೆ ಪಿ ಆಳ್ವ, ಬೂತ್ ಅಧ್ಯಕ್ಷ ಸೀತಾರಾಮ ರೈ ,ಮೌರಿಶ್‌ಮಸ್ಕರೇನಸ್ ಉಪಸ್ಥಿತರಿದ್ದರು. ನಿಕಟಪೂರ್ವ ವಲಯಾಧ್ಯಕ್ಷರಾದ ಮನೋಹರ್ ರೈ ಎಂಡೆಸಾಗು ಸ್ವಾಗತಿಸಿ ವಂದಿಸಿದರು.

Related Posts

Leave a Reply

Your email address will not be published.