ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನೀರಿನ ಬಳಕೆ, ಸಂರಕ್ಷಣೆಯ ಅರಿವು ಕಾರ್ಯಕ್ರಮ

ಸಕಲ ಜೀವಿಗಳಿಗೂ ಬೇಕು ನೀರು, ನೀರಿಲ್ಲದೆ ಇರಲಾಗದು ಬದುಕು ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಸಲುವಾಗಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ “ಪ್ರತಿ ಹನಿಯ ಎಣಿಕೆ “ಎನ್ನುವ ವಿಚಾರದ ಕುರಿತು ಕಾರ್ಯಕ್ರಮ ನಡೆಸಲಾಯಿತು .

ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾಗಿ ಡಾ. ವಿನೋದ್ ಎ ಆರ್ ಸಹಪ್ರಾಧ್ಯಾಪಕರು ಕೃಷಿ ಕೇಂದ್ರ ಬ್ರಹ್ಮಾವರ ಇವರು ವಿದ್ಯಾರ್ಥಿಗಳಿಗೆ ನೀರಿನ ಮಹತ್ವ, ನೀರಿನ ಮಿತ ಬಳಕೆ ,ಜೊತೆಗೆ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕುರಿತಾಗಿ ಜಾಗೃತಿ ಅರಿವು ಮೂಡಿಸಿದರು . ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಮಣ್ಯ,ಹಾಗೂ ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್ ವಿದ್ಯಾರ್ಥಿಗಳಿಗೆ ಜಾಗೃತಿಯ ಕುರಿತು, ದಿನನಿತ್ಯದಲ್ಲಿ ನೀರಿನ ಬಳಕೆ ಸಂರಕ್ಷಿಸುವ ಕುರಿತಾಗಿ ಮಾತನಾಡಿದರು. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಗೀತಾ ಮತ್ತು ಶ್ರೀಮತಿ ಶೈಲಾ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಿದ್ಧಿಕಾ, ಪ್ರತೀಕ್ಷಾ ನಿರೂಪಿಸಿದರೆ, ಸುಹಾನಾ, ಸ್ವಾಗತಿಸಿ , ನಂದಿನಿ ಅತಿಥಿಗಳನ್ನು ಪರಿಚಯಿಸಿ, ಮಿಥಿಲ್ ವಂದಿಸಿದರು.

Related Posts

Leave a Reply

Your email address will not be published.