ದೇರಳಕಟ್ಟೆ: “ಮೇಲೋಗರ” ಕೃತಿ ಲೋಕಾರ್ಪಣೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ವತಿಯಿಂದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಕೆ. ರವೀಂದ್ರ ರೈ ಕಲ್ಲಿಮಾರ್ ಅವರ ಚಿಂತನ ಶಾಲೆಯ ಸಂಚಿತ ಬರಹಗಳ ಸಂಕಲನ “ಮೇಲೋಗರ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ದೇರಳಕಟ್ಟೆ ದಿ ಕಂಫರ್ಟ್ಸ್ ಇನ್ ಹೋಟೆಲ್ ನಲ್ಲಿ ನಡೆಯಿತು.

ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ನಿವೃತ್ತ ಮುಖ್ಯಶಿಕ್ಷಕ ಕೆ. ರವೀಂದ್ರ ರೈ ಕಲ್ಲಿಮಾರ್ ಅವರ ಚಿಂತನ ಶಾಲೆಯ ಸಂಚಿತ ಬರಹಗಳ ಸಂಕಲನ “ಮೇಲೋಗರ” ಕೃತಿ ಲೋಕಾರ್ಪಣೆಗೈದರು. ಬಳಿಕ ಮಾತನಾಡಿದ ಅವರು,  ಅತ್ಯುತ್ತಮ ಶಿಕ್ಷಕರು, ಚಿಂತಕರು, ಸಂಘಟಕರಾಗಿ ಮೇರು ವ್ಯಕ್ತಿತ್ವ ಹೊಂದಿರುವ ರವೀಂದ್ರ ರೈ ಅವರು ಹೊಸ ಹೊಸ ವಿಷಯ, ವಿಚಾರಗಳ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಭವಿಷ್ಯದ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ಪ್ರೇರಣೆಯಾಗಿದ್ದರು ದಂಪತಿ ನಡುವಿನ ಹೊಂದಾಣಿಕೆ, ಮಾತಿನ ಮಹತ್ವ, ದುಶ್ಚಟಗಳಿಂದ ದೂರವಿರಿಸಲು ಮೌಲಿಕವಾದ ಅರ್ಥಪೂರ್ಣವಾದ ಕೃತಿಯನ್ನು ಸಮಾಜದ ಎಲ್ಲರು ಓದಬೇಕು. ಹಾಗೆಯೇ ನಿವೃತ್ತ ಜೀವನದಲ್ಲಿ ಇನ್ನಷ್ಟು ಕೃತಿಗಳು ಹೊರಬರುವಂತಾಗಲಿ ಎಂದು ಆಶಿಸಿದರು.

 ಅಧ್ಯಕ್ಷತೆ ವಹಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಚಿನ್ನಪ್ಪ ಗೌಡ ಅವರು  “ಮೇಲೋಗರ” ಕೃತಿಯ ಬಗ್ಗೆ ಮೆಲುಕು ಹಾಕಿ  ವಿದ್ಯಾರ್ಥಿಗಳಿಗೆ ಹೇಳಿದ ನೀತಿಯ ೫೪ಕಥನಗಳ ಚಿಂತನೆಯ ಬರಹ ವಿದ್ಯಾರ್ಥಿ ಕೇಂದ್ರೀಕೃತಗೊಂಡಿದೆ ಎಂದರು.

ಕೃತಿಯ ಲೇಖಕ ಕೆ. ರವೀಂದ್ರ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

 ತುಳುನಾಡ ಐಕ್ಯತಾ ವೇದಿಕೆ ಅಧ್ಯಕ್ಷ ಎ.ಎ. ಹೈದರ್ ಪರ್ತಿಪ್ಪಾಡಿ, ಕನ್ನಡ ಸಾಹಿತ್ಯ ಪರಿಷತ್ ನ ಉಳ್ಳಾಲ ತಾಲೂಕು ಘಟಕದ ಕೋಶಾಧಿಕಾರಿ, ದಿ ಕಂಫರ್ಟ್ ಇನ್ ಹೊಟೇಲ್ ಮಾಲೀಕರಾದ ಚಂದ್ರಹಾಸ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ನಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಭಾಗ್ಯರಾಜ್ ಹರೇಕಳ ಉಪಸ್ಥಿತರಿದ್ದರು.

 ಇದಕ್ಕೂ ಮುನ್ನ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಗಾಯನಗೈದ ಕಲಾವಿದವತೋನ್ಸೆ ಪುಷ್ಕಳ್ ಕುಮಾರ್, ತಬಲಾದಲ್ಲಿ ಸಹಕರಿಸಿದ ದೀಪಕ್ ರಾಜ್ ಉಳ್ಳಾಲ್ ಹಾಗೂ ಕೀಬೋರ್ಡ್ ನಲ್ಲಿ ಸಹಕರಿಸಿದ ಸತೀಶ್ ಸುರತ್ಕಲ್ ಅವರನ್ನು ಗೌರವಿಸಲಾಯಿತು.

Related Posts

Leave a Reply

Your email address will not be published.