ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ CSR ನಿಧಿಯಿಂದ ಹೈಟೆಕ್ ಶೌಚಾಲಯ ನಿರ್ಮಾಣ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ CSR ನಿಧಿಯಿಂದ ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು.

ಸತೀಶ್ ಎಮ್ ನಾಯಕ್ ನೂತನ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ CSR ನಿಧಿಯಿಂದ ಶೌಚಾಲಯ 12 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯಾಗಿ ನಿರ್ಮಾಣವಾಗಿದೆ ಇದರ ಮುಖ್ಯ ಉದ್ದೇಶ ಶಾಲೆಯ ಪರಿಸರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದಾನಿಗಳು ಶೌಚಾಲಯ ನಿರ್ಮಾಣಕ್ಕೆ ಹಣ, ಸಾಮಗ್ರಿಗಳು ಅಥವಾ ತಾಂತ್ರಿಕ ಸಹಾಯವನ್ನು ಒದಗಿಸಬಹುದು, ಇದು ಶಾಲೆಯ ಮೂಲಸೌಕರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದರು.

ಹೆಣ್ಣು ಮಕ್ಕಳ ಶೌಚಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ನಾಗರಾಜ ಪಟ್ಕಾರ್ ಉದ್ಘಾಟಿಸಿದರು.ಗಂಡು ಮಕ್ಕಳ ಶೌಚಾಲಯವನ್ನು ಶ್ರೀ ಪ್ರಶಾಂತ ಬೆಳಿರಾಯ ಉದ್ಘಾಟಿಸಿದರು.

ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಬೈಂದೂರು ಕ ಕ್ಷೇತ್ರದಲ್ಲಿ ಸರಕಾರಿ ಶಾಲೆಯಲ್ಲಿ ಒಂದು ಹೈಟೆಕ್ ಮಾದರಿಯ ಶೌಚಾಲಯವನ್ನು ನಿರ್ಮಾಣ ಮಾಡಿಕೊಟ್ಟ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌ ನ ಸಂಸ್ಥೆಗೆ ಅಭಿನಂದನೆ ಸಲಿಸಿದರು

ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿಶ್ವನಾಥ ಶ್ಯಾನುಭಾಗ್ ವಹಿಸದ್ದರು.ಸಂಘ ಸಂಸ್ಥೆಯ ದಾನಿಗಳು ಶಾಲೆಯ ಅಭಿವೃದ್ಧಿಗಾಗಿ 10,000 ಎರಡು ಚೆಕ್ ವಿತರಿಸಿದರು

ಎಸ್. ಜನಾರ್ದನ ಮರವಂತೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶೌಚಾಲಯದ ಅಗತ್ಯವನ್ನು ತಿಳಿಸಿ ಅದನ್ನು ನಮ್ಮ ಊರಿಗೆ ಒದಗಿಸಿಕೊಟ್ಟ ಕ್ಯಾನ್ ಫಿನ್ ಸಂಸ್ಥೆಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರು ಶ್ರೀ ಸತ್ಯನಾರಾಯಣ ಕೊಡೇರಿ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂತೋಷ ಮೊಗವೀರ, ವಿದ್ಯಾರ್ಥಿ ನಾಯಕಿ ಕುಮಾರಿ ಸೌಜನ್ಯ, SDMC ಉಪಾಧ್ಯಕ್ಷೆ ಶಾರದಾ ಪೂಜಾರಿ ಉಪಸ್ಥಿತರಿದ್ದರು..ಸಂಸ್ಥೆಯ ಮುಖ್ಯೋಪಾಧ್ಯಾಯ ಶ್ರೀ ಸೀತಾರಾಮ. ಬಿ. ಸ್ವಾಗತಿಸಿದರು. ಶಶಿಕಲಾ ಮತ್ತು ನಿರ್ಮಲ ಪಟಗಾರ್ ನಿರೂಪಿಸಿದರು. ಶಿಕ್ಷಕಿ ಶಾರದಾ ವಂದಿಸಿದರು

Related Posts

Leave a Reply

Your email address will not be published.