ಹಾಸನ ಜಿಲ್ಲೆ:ಚಂದನಹಳ್ಳಿಯಲ್ಲಿ ಅಸಂಬದ್ಧ ಬಂಧ,ಮದುವೆಯಾದವನ ಸಂಗ ಒಲ್ಲದ ಮಹಿಳೆ ಕೆರೆಗೆ ವಾಹನ ನುಗ್ಗಿಸಿ ಒಲ್ಲದವಳ ಕೊಲೆ

ಕರ್ನಾಟಕದ ಹಾಸನ ಜಿಲ್ಲೆಯ ಚಂದನಹಳ್ಳಿಯಲ್ಲಿ ವಿವಾಹಿತನೊಬ್ಬನು ಮಹಿಳೆಯೊಬ್ಬಳ ಸಂಗ ಬಯಸಿದ್ದು, ಆಕೆ ನಿರಾಕರಿಸಿದಳೆಂದು ಕೆರೆಗೆ ವಾಹನ ನುಗ್ಗಿಸಿ ಆಕೆಯನ್ನು ಸಾಯಿಸಿರುವುದು ತಿಳಿದು ಬಂದಿದೆ.ಆರೋಪಿ ರವಿ ಮದುವೆಯಾಗಿರುವ ವ್ಯಕ್ತಿ. ಆತ ಬಯಸಿ ಆತನಿಂದ ಸಾವು ಕಂಡವಳು ತಿಳಿದವಳೇ ಆದ 32ರ ಶ್ವೇತಾ.

ಗಂಡನಿಂದ ಬೇರಾಗಿರುವ ಶ್ವೇತಾ ತನ್ನ ಹೆತ್ತವರೊಂದಿಗೆ ಬದುಕುತ್ತಿದ್ದಳು. ಕಳೆದ ಕೆಲವು ತಿಂಗಳುಗಳಿಂದ ರವಿ ಆಕೆಯ ಬೆನ್ನು ಹತ್ತಿದ್ದ. ನನ್ನ ಲಿವಿಂಗ್ ಸಂಗಾತಿಯಾಗು. ಇಲ್ಲವೇ ನೀನು ಒಪ್ಪಿದರೆ, ನನ್ನ ಹೆಂಡತಿಯನ್ನು ಬಿಟ್ಟು ನಿನ್ನನ್ನು ಮದುವೆಯಾಗುತ್ತೇನೆ ಎಂದು ಗಂಟು ಬಿದ್ದಿದ್ದ. ಆದರೆ ಶ್ವೇತಾ ಅವನ ಎಲ್ಲ ಬೇಡಿಕೆಗಳನ್ನು ನಿರಾಕರಿಸಿದ್ದಳು.

ಪರಿಚಿತ ಕರೆದನೆಂದು ಶ್ವೇತಾ ಕಾರು ಹತ್ತಿದ್ದಾಳೆ. ಆತ ನೇರ ಕಾರನ್ನು ಚಂದನಹಳ್ಳಿ ಕೆರೆಗೆ ನುಗ್ಗಿಸಿ ಆಕೆ ಮುಳುಗುವಂತೆ ಮಾಡಿದ್ದಾನೆ. ತಾನು ಯೋಜಿಸಿದಂತೆ ಈಜಿ ದಡ ಸೇರಿದ್ದಾನೆ. ಆಕಸ್ಮಿಕವಾಗಿ ಕಾರು ಕೆರೆಗೆ ಬಿತ್ತು ಎಂದು ಪೋಲೀಸರಲ್ಲಿ ಕತೆ ಕಟ್ಟಿದ. ಇರುಳೆಲ್ಲ ಒದ್ದಾಡಿ ಶವವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ. ಶ್ವೇತಾ ಹೆತ್ತವರು ರವಿಯ ಕಪಟ ಹೇಳಿದ ಮೇಲೆ, ಪೋಲೀಸರು ರವಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
