ಉಡುಪಿಯಲ್ಲಿ ಮುಂಗಾರು ಬಿರುಸು : ಬೈಂದೂರಿನಲ್ಲಿ ಹೆಚ್ಚು ಸುರಿದ ಮಳೆ

ಉಡುಪಿ : ಉಡುಪಿಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಿಂದ ಸುರಿದ ಮುಂಗಾರು ಮಳೆ ವರದಿಯ ಪ್ರಕಾರ ಬೈಂದೂರು, ಕಾಪು ಮತ್ತು ಹೆಬ್ರಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರಾಸರಿ 71 ಮಿಲಿ ಮೀಟರ್ ಮಳೆಯಾಗಿದ್ದು, ಕುಂದಾಪುರದಲ್ಲಿ 64, ಕಾರ್ಕಳದಲ್ಲಿ 60, ಹೆಬ್ರಿಯಲ್ಲಿ 70, ಬೈಂದೂರಿನಲ್ಲಿ 91, ಬ್ರಹ್ಮಾವರದಲ್ಲಿ 61 ಮತ್ತು ಕಾಪುವಿನಲ್ಲಿ 86 ಮಿಲಿಮೀಟರ್ ಮಳೆಯಾಗಿದೆ.