Bynduru : ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ

ಬೈಂದೂರಿನ ವಂಡ್ಸೆ ಗ್ರಾಮ ಪಂಚಾಯತ್ ಹಳೆ ಎಸ್‍ಎಲ್‍ಆರ್‍ಎಂ ಘಟಕದಲ್ಲಿರುವ ಕಸ ವಿಲೇವಾರಿ ಮಾಡದೆ ಇರುವುದರಿಂದ ಗಬ್ಬು ನಾರುತ್ತಿದೆ. ಪರಿಸರದಲ್ಲಿರುವ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದು, ಕಸವನ್ನು ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಂಡ್ಸೆ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆ ಬಳಿ ಇದ್ದ ಹಳೆ ಎಸ್‍ಎಲ್‍ಆರೆಂ ಘಟಕವನ್ನು ಜನತಾ ಕಾಲೋನಿ ಬಳಿ ನಿರ್ಮಿಸಿದ ಹೊಸ ಎಸ್‍ಎಲ್‍ಆರೆಂ ಘಟಕಕ್ಕೆ ಪ್ರಸ್ತುತ ಸ್ಥಳಾಂತರ ಮಾಡಲಾಗಿದೆ. ಹಳೆ ಎಸ್‍ಎಲ್‍ಆರೆಂ ಘಟಕದಲ್ಲಿದ್ದ ನಿರೂಪಯುಕ್ತ ಕಸವನ್ನು ಅಲ್ಲೆ ಬಿಟ್ಟಿರುವುದರಿಂದ ಮಳೆ ನೀರಿಗೆ ಕೊಳೆತು ಗಬ್ಬು ನಾರುತ್ತಿದ್ದು, ಕೊಳಚೆ ನೀರು ಘಟಕದ ಹತ್ತಿರದಲ್ಲಿರುವ ಶಾಲೆ ಬಾವಿಗೆ ನುಗ್ಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗರುಜನೆಗಳು ಸರ್ವೇಸಾಮಾನ್ಯವಾಗಿ ಹಬ್ಬುತ್ತದೆ.

ಅಲ್ಲೇ ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆಯಲ್ಲಿ ಒಟ್ಟು 420 ಮಕ್ಕಳು ಓದುತ್ತಿದ್ದಾರೆ.ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಳೆ ಎಸ್‍ಎಲ್‍ಆರ್‍ಎಂ ಘಟಕದ ಆವರಣದಲ್ಲಿರುವ ಕಸವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ ಪೂಜಾರಿ ಅವರು ಮಾತನಾಡಿ ಕಸ ವಿಲೇವಾರಿ ಮಾಡಬೇಕೆಂದು ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಇಲ್ಲಿ ತನಕ ಗ್ರಾಮ ಪಂಚಾಯತ್ ಮತ್ತು ಅಧಿಕಾರಿ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು..

Related Posts

Leave a Reply

Your email address will not be published.