ಪಡುಬಿದ್ರಿ: ಮರಳು ಕದ್ದು ಸಾಗಾಟ: ಚಾಲಕ, ಮರಳು ಸಹಿತ ಟಿಪ್ಪರ್ ವಶಕ್ಕೆ

ಪಡುಬಿದ್ರಿ: “ಶ್ರೀ ಕಟೀಲು” ಹೆಸರಿನ ಟಿಪ್ಪರ್ ನಲ್ಲಿ ಕದ್ದು ಮರಳು ಸಾಗಿಸುತ್ತಿದ್ದ ಈಚರ್ ಲಾರಿ ಮರಳು ಸಹಿತ ಅದರ ಚಾಲಕನನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆ.ಎ.20-ಎ.ಬಿ. 3474 ನೋದಾನಿ ಸಂಖ್ಯೆಯ ಶ್ರೀ ಕಟೀಲ್ ಹೆಸರಿನ ಈಚರ್ ನಲ್ಲಿ ಚಾಲಕ ಪ್ರಮೋದ್ ಎಂಬಾತ ಅಕ್ರಮವಾಗಿ ಮರಳು ಸಾಗಿಸುವಾಗ ವಾಹನ ತಪಾಸಣೆ ನಡೆಸುತ್ತಿದ್ದ ಪಡುಬಿದ್ರಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಯಾಗಲಿ, ಹಾಗೂ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲದೆ, ಮೂಡಬಿದಿರೆಯ ಪುತ್ತಿಗೆ ಗ್ರಾಮದ ಪಾಲ್ಕಡದ ಕೊಡ್ಯಡ್ಕ ದೇವಳದ ಹತ್ತಿರ ಮರಳನ್ನು ಕಳವು ಮಾಡಿ ಸಾಗಿಸುತ್ತಿದ್ದು, ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.

Related Posts

Leave a Reply

Your email address will not be published.