ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್ ಸಮಾರೋಪ
ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಆಶ್ರಯದಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಪದವಿ ವಿಭಾಗದಲ್ಲಿ ಯೆನೆಪೋಯ ಕಾಲೇಜು ವಿದ್ಯಾರ್ಥಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಗ್ರೌಂಡ್‌ನಲ್ಲಿ ನಡೆದ ಫೈನಲ್‌ನಲ್ಲಿ ಯೆನಪೋಯ ಕಾಲೇಜು ತಂಡ 1-0 ಅಂತರದಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು ಮಣಿಸಿ ಪ್ರಶಸ್ತಿ ಬಾಚಿಕೊಂಡಿತು.
ಪಿ.ಯು.ಕಾಲೇಜು ವಿದ್ಯಾರ್ಥಿಗಳ ವಿಭಾಗದ ಫೈನಲ್‌ನಲ್ಲಿ ಸೈಂಟ್ ಅಲೋಸಿಯಸ್ ತಂಡವು ಪಾಂಡ್ಯರಾಜ್ ಬಳ್ಳಾಲ್ ಪಿಯು ಕಾಲೇಜು ತಂಡವನ್ನು 2-1 ಅಂತರದಲ್ಲಿ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ಫೈನಲ್‌ನಲ್ಲಿ ಸೈಂಟ್ ತೆರೇಸಾ ಹೈಸ್ಕೂಲ್ ತಂಡವನ್ನು ಯೆನಪೋಯ ಹೈಸ್ಕೂಲ್ ತಂಡ 4-0 ತಂತರದಲ್ಲಿ ಬಗ್ಗು ಬಡಿದು ಪ್ರಶಸ್ತಿ ಗಳಿಸಿತು.
ವಿದ್ಯಾರ್ಥಿ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕಾರ್ಪೊರೇಟರ್ ಎ.ಸಿ ವಿನಯರಾಜ್ ಮುಖ್ಯ ಅತಿಥಿಯಾಗಿದ್ದರು.
ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಡಿ ಎಂ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಫುಟ್ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ, ಎಂ.ಎಸ್.ಸ್ಫೋಟ್ಸ್‌ನ ಶರೀಫ್, ಅಕ್ರೋಲೈಟ್‌ಖಾಲಿದ್ , ಮಾನವ ಹಕ್ಕುಗಳ ಜಿಲ್ಲಾ ಉಸ್ತುವಾರಿ ಸುದೇಶ್ , ನಿಯಾಜ್ ಎ.ಕೆ , ಮೋಹನ್ ಬೆಂಗ್ರೆ , ಎಂ.ಐ.ಖಲೀಲ್, ರವಿ ಕಿರಣ್, ಖಜಾಂಚಿ ಫಿರೋಝ್ ಉಳ್ಳಾಲ,ಸದಸ್ಯರಾದ ಅಬ್ದುಲ್ ಲತೀಫ್, ಸುಜೀತ್ ಕೆ.ವಿ.ಅನಿಲ್ ಪಿ.ವಿ. , ಯೂನುಸ್ ಸೌದಿ ಅರೇಬಿಯಾ, ಸಂಶುದ್ದೀನ್ ಬಂದರ್, ಆಸಿಫ್ ಡೀಲ್ಸ್, ಕಾರ್ಯದರ್ಶಿ ಹುಸೇನ್ ಬೋಳಾರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.