ಕಡಬ ಪೇಟೆಯಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಿದ ಪವರ್‍ಮ್ಯಾನ್ ಪಿ.ಜೆ ಗುರುಮೂರ್ತಿ

ಕಡಬ ಪೇಟೆಯಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವೊಂದನ್ನು ಕಡಬ ಸಿಟಿ ಫೀಡರ್ ಪವರ್‍ಮ್ಯಾನ್ ಆಗಿರುವ ಪಿ.ಜೆ ಗುರುಮೂರ್ತಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಡಬ ಪೇಟೆಯಲ್ಲಿ ಪಾರಿವಾಳವೊಂದರ ಕಾಲಿಗೆ ಪ್ಲಾಸ್ಟಿಕ್ ಹಗ್ಗವೊಂದು ತಗುಲಿ ನಂತರದಲ್ಲಿ ಆ ಪಾರಿವಾಳ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ತಕ್ಷಣ ಸ್ಥಳೀಯರು ಪವರ್ ಮ್ಯಾನ್ ಗಮನಕ್ಕೆ ತಂದಿದ್ದು ಪವರ್‍ಮ್ಯಾನ್ ಗುರುಮೂರ್ತಿ ತಕ್ಷಣ ವಿದ್ಯುತ್ ಸಂಪರ್ಕ ಬಂದ್ ಮಾಡಿ, ವಿದ್ಯುತ್ ಕಂಬವೇರಿ ಬಾಯಿಯಿಂದಲೇ ಕಚ್ಚಿ ಹಿಡಿದುಕೊಂಡು ಪಾರಿವಾಳವನ್ನು ರಕ್ಷಣೆ ಮಾಡಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಥಳೀಯರಾದ ಗೋಪಾಲ್ ನಾಯಕ್ ಮೇಲಿನಮನೆ, ನಾಗೇಶ್ ಇತರರು ಸಹಕರಿಸಿದ್ದಾರೆ.

Related Posts

Leave a Reply

Your email address will not be published.