ಪ್ರತಿಭಾನ್ವಿತಾ ವಿದ್ಯಾರ್ಥಿನಿ ಕ್ಯಾನ್ಸರ್ ಗೆ ಬಲಿ.ದುಖಃ ಸಾಗರದಲ್ಲಿ ಕುಟುಂಬಸ್ಥರು.
ಶಿರ್ವ:ಹೂವಾಗಿ ಅರಳುವ ಮುನ್ನವೇ ವಿಧಿ ಮುಗ್ದ ಹೆಣ್ಣು ಮಗುವಿನ ಬದುಕನ್ನೇ ಕಸಿದು ಬಿಟ್ಟಿದೆ.ನಗು ನಗುತ್ತಾ ಎಲ್ಲರೊಂದಿಗೂ ಬೆರೆತು ಸ್ನೇಹ ಜೀವಿಯಾಗಿದ್ದ ಮುಗ್ದ ಯುವತಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.ಕ್ಯಾನ್ಸರ್ ಎಂಬ ಮಹಾಮಾರಿ ಅಕೆಯನ್ನ ಬಲಿ ಪಡೆದುಕೊಂಡಿದೆ.
ಉಡುಪಿಯ ಶಿರ್ವ ಕಾನ್ವೆಂಟ್ ರಸ್ತೆಯ ಇಪ್ಪತ್ತೊಂದು ವರ್ಷದ ವಿದ್ಯಾರ್ಥಿನಿ ರಿಯಾನಾ ಜೆನ್ ಡಿಸೋಜಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾಳೆ.
ರಿಯಾನಾ ಜೆನ್ ಡಿಸೋಜಾ ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಕಾಂ ಪದವಿ ಅರಂಭಿಸುವಷ್ಟರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು.ಮಣಿಪಾಲ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕವನ್ನು ತ್ಯಜಿಸಿದ್ದಾಳೆ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ರಿಯಾನ ಎಲ್ಲರೊಂದಿಗೂ ಬೆರೆಯುವ ಸ್ವಾಭವದಳಾಗಿದ್ದಳು.ಹಲವು ಸಂಘಟನೆಗಳಲ್ಲಿ ಸಕ್ರಿಯಾರಾಗಿದ್ದಳು.
ನೃತ್ಯ ಅಕೆಯ ಅಸಕ್ತಿಯ ಹವ್ಯಾಸವಾಗಿತ್ತು.ಹಲವಾರು ನೃತ್ಯಗಳಿಗೆ ನೃತ್ಯ ಸಂಯೋಜನಕಿ ಕೂಡ ಅಗಿದ್ದಳು.
ರಿಯಾನ ಅಗಲಿಕೆ ಅಕೆಯ ಪ್ರೀತಿ ಪಾತ್ರರಲ್ಲಿ ತುಂಬಲಾರದ ನೋವು ತಂದಿದೆ.