ಕದ್ರಿ : ಹೋಟೆಲ್ ಡಿಂಕಿ ಡೈನ್‍ ನಲ್ಲಿ ಉಚಿತ ಕಷಾಯ, ಮೆಂತೆ ಗಂಜಿ ವಿತರಣೆ

ಹೋಟೆಲ್ ಡಿಂಕಿ ಡೈನ್‍ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನದ ವತಿಯಿಂದ ಆಟಿದ ಅಮಾವಾಸ್ಯೆಯ ಪ್ರಯುಕ್ತ ಉಚಿತ ಹಾಲೆ ಮರದ ಕೆತ್ತೆಯ ಕಷಾಯ ಮತ್ತು ಮೆಂತೆ ಗಂಜಿಯ ವಿತರಣಾ ಕಾರ್ಯಕ್ರಮ ನಡೆಯಿತು.

ಆಟಿ ತಿಂಗಳಲ್ಲಿ ಬರುವ ಅಮಾವಾಸ್ಯೆಯಂದು ಕರಾವಳಿ ಭಾಗದಲ್ಲಿ ಆಟಿ ಕಷಾಯ ಸೇವನೆ ಡಿಂಕಿ ಡೈನ್ ಹೋಟೆಲ್ ಮಾಲಕರಾದ ಸ್ವರ್ಣ ಸುಂದರ್, ಕಿರಣ್ ಜೋಗಿ, ಮಾಜಿ ಮೇಯರ್ ಹರಿನಾಥ್ ಜೋಗಿ ಪತಂಜಲಿ ಡಾ. ಜ್ಞಾನೇಶ್ ನಾಯಕ್, ಅಶೋಕ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಪ್ರದೀಪ್ ಆಳ್ವಾ, ಬಾಸ್ಕರ್ ರೈ ಕುಕ್ಕುವಳ್ಳಿ, ಯಾದವ್ ಕೋಟ್ಯಾನ್, ರೋಶನ್ ರೊನಲ್ಡ್, ರಕ್ಷಿತ್ ಕುಡುಪು ಉಪಸ್ಥಿತರಿದ್ದರು.

ನಗರದ ಕದ್ರಿಯಲ್ಲಿರುವ ಡಿಂಕಿ ಡೈನ್ ಹೋಟೆಲ್‍ನ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ವಿತರಿಸಲಿದ್ದಾರೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತುಳು ವಾಗ್ಮಿ ದಯಾನಂದ ಕತ್ತಲ್‍ಸಾರ್ ತಿಳಿಸಿದ್ದಾರೆ.

Related Posts

Leave a Reply

Your email address will not be published.