ಮಣಿಪುರ ಕೃತ್ಯ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ
ಮಹಿಳೆಯರನ್ನು ಮಾತೆಯರೆನ್ನುವ ಬಿಜೆಪಿ ಸರ್ಕಾರದ ಇನ್ನೊಂದು ಮುಖ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವುದರ ಮೂಲಕ ಮಣಿಪುರದಲ್ಲಿ ಬಹಿರಂಗಗೊಂಡಿದೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಬಿಜೆಪಿ ಆಡಳಿತ ನಡೆಸುತ್ತಿರುವ ಮಣಿಪುರ ರಾಜ್ಯದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಕಾಪು ಪೇಟೆಯಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಪ್ರಮುಖರಾದ ಬೆಳಪು ದೇವಿಪ್ರಸಾದ್ ಶೆಟ್ಡಿ, ಸರ್ಪುದ್ಧೀನ್ ಶೇಖ್, ಬಾಲಚಂದ್ರ ಎರ್ಮಾಳು, ನವೀನ್ ಚಂದ್ರ ಶೆಟ್ಟಿ, ಅಮೀರ್ ಆಹಮ್ಮದ್, ಹರೀಶ್ ನಾಯಕ್, ಎಂ.ಎ.ಗಪೂರ್, ಶೇಖರ್ ಹೆಜಮಾಡಿ, ದಿನೇಶ್ ಕೋಟ್ಯಾನ್, ಶಿವಾಜಿ ಸುವರ್ಣ, ಕರುಣಾಕರ್ ಪೂಜಾರಿ, ಜ್ಯೋತಿ ಮೆನನ್, ತಸ್ರೀನ್ ಉಚ್ವಿಲ, ವಿಶ್ವಾಸ್ ಅಮೀನ್, ಸರಸು ಬಂಗೇರ, ಅಶೋಕ್ ನಾಯರಿ ಮುಂತಾದವರಿದ್ದರು.