ಕಾರ್ಕಳ : ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ

ಕಾರ್ಕಳ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕಾರ್ಕಳದ ಬಸ್ ನಿಲ್ದಾಣದಲ್ಲಿ ನಡೆಯಿತು.

ಕಾರ್ಕಳ ತಾಲೂಕು ದಂಡಾಧಿಕಾರಿ ನರಸಪ್ಪ, ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರು ಶಾಂತಪ್ಪ, ಹಾಗೂ ಪುರಸಭಾ ಮುಖ್ಯ ಅಧಿಕಾರಿ, ರೂಪಾ ಟಿ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.
ಸಭೆ ಉದ್ದೇಶಿಸಿ ಮಾತನಾಡಿದ ಕಾರ್ಕಳ ತಾಲೂಕು ದಂಡಾಧಿಕಾರಿ ನರಸಪ್ಪ, ಭಾರತ ಒಂದು ಪ್ರಪಂಚದಲ್ಲಿ ಅತಿ ಬಲಿಷ್ಠವಾದ ರಾಷ್ಟ್ರವಾಗಿದೆ. ಏಪ್ರಿಲ್ 26ರಂದು ನಾವು ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ ಎಂದು ಈ ದಿನ ನಾವು ಪ್ರತಿಜ್ಞೆಯನ್ನು ಮಾಡಬೇಕೆಂದು ಹೇಳಿದರು.

ಕಾರ್ಕಳ ಪುರಸಭೆ ಅಧಿಕಾರಿ ರೂಪ ಟಿ ಶೆಟ್ಟಿ ಯವರು ಮಾತನಾಡಿ, ಜನರಿಗೆ ಮತದಾನದ ಬಗ್ಗೆ ಮನವರಿಕೆ ಮಾಡುವ ಉತ್ತಮ ಕಾರ್ಯಕ್ರಮವಾಗಿದೆ. ನಮ್ಮ ಒಂದು ಮತದಿಂದ ಇಡೀ ದೇಶ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಈ ಜನ ಜಾಗೃತಿ ಸಭೆಯಲ್ಲಿ ಹಲವು ಸಂಘ ಸಂಸ್ಥೆಗಳು ಕೃಷಿ ಇಲಾಖೆ ಆರೋಗ್ಯ ಇಲಾಖೆ ಮೆಸ್ಕಾಂ ಇಲಾಖೆ, ಹಾಗೂ ಪುರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.