ಕಾರ್ಕಳ : ಮೂರು ಮಾರ್ಗದ ಅಂಗಡಿಯಲ್ಲಿ ಮಾರಿಯಮ್ಮನ ಪೂಜೆ
ಕಾರ್ಕಳ ಇಂದಿನಿಂದ ಸಂಭ್ರಮದ ಎರಡು ದಿನಗಳ ಮಾರಿ ಪೂಜೆ ಇಂದು ಬೆಳಗಿನ ಜಾವ ಪ್ರಾರಂಭವಾಗಿ ನಾಳೆ ಸಂಜೆಗೆ ಕೊನೆಗೊಳ್ಳಲಿದೆ. ಇಂದು ಬೆಳಿಗ್ಗೆ ಮೂರು ಮಾರ್ಗದಲ್ಲಿರುವ ಅಂಗಡಿಯಲ್ಲಿ ಮಾರಿಯಮ್ಮನ ಪೂಜೆ ಪುರಸ್ಕಾರ ಮಾಡಿದ ನಂತರ ಕುಳ್ಳಿರಿಸಿ ಬೆಳಗಿನಿಂದಲೇ ಭಕ್ತಾದಿಗಳು ಮಾರಿಯಮ್ಮನ ದರ್ಶನವನ್ನು ಸರತಿ ಸಾಲಿನಲ್ಲಿ ನಿಂತು ದರ್ಶನ್ ಪಡೆದು ತಮ್ಮ ಹರಕೆ ಕಾಣಿಕೆಗಳನ್ನು ಅರ್ಪಿಸಿದರು.
ಶ್ರೀದೇವಿ ದುರ್ಗೆ ಅವತಾರವಾಗಿದ್ದು ಊರಿನ ಸಕಲ ಕಷ್ಟ ದಾರಿದ್ರಾ ರೋಗ ರುಜಿನಗಳನ್ನು ನಿರ್ಮೂಲನೆ ಮಾಡುವ ಶಕ್ತಿ ಹೊಂದಿದ್ದಾಳೆ ಎಂದು ನಂಬಿಕೆ. ಕಳೆದ ಮಾರ್ಚ್ ತಿಂಗಳಲ್ಲಿ ಮಾರಿಗುಡಿ ದೇಗುಲವನ್ನು ಪುನರ್ ನಿರ್ಮಾಣಗೊಂಡ ನಂತರ ಇದು ಮೊದಲ ಮಾರಿ ಪೂಜೆಯಾಗಿದೆ.