ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಿನ ಆತ್ಮಾವಲೋಕನ ನಡೆಸುತ್ತೇವೆ-ಡಿ.ಆರ್.ರಾಜು

ಕಾರ್ಕಳ: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನ ಪಡೆದಿದೆ. ಗೆಲುವಿನ ಹಾಗೂ ಸೋಲಿನ ಅಂತರದ ಕಾರಣದ ಬಗ್ಗೆ ಆತ್ಮಾವಲೋಕನ ನಡೆಸಿ ಉಭಯ ಜಿಲ್ಲೆಯ ನಾಯಕರು ಪಕ್ಷವನ್ನು ಮುಂಬರುವ ಚುನಾವಣೆಗೆ ಸಿದ್ಧಗೊಳಿಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಡಿ.ಆರ್ ರಾಜು ಹೇಳಿದರು.

ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪರ ಅಲೆಯಿಂದ 135 ಸೀಟು ಗೆದ್ದಿದೆ. ಆದರೆ ಎರಡು ಜಿಲ್ಲೆಗಳಲ್ಲಿ ಏಳು ಸೀಟುಗಳನ್ನು ನಿರೀಕ್ಷಿಸಿದ್ದು ಇಲ್ಲಿನ ಫಲಿತಾಂಶ ನಮಗೆ ಅಚ್ಚರಿ ಉಂಟುಮಾಡಿದೆ ಎಂದರು. ಬೈಂದೂರಿನಲ್ಲಿ ಗೋಪಾ¯ ಪೂಜಾರಿ 4 ಸಲ ಗೆದ್ದವರು. ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಒಳ್ಳೆಯ ಅಭ್ಯರ್ಥಿಗಳನ್ನೇ ಪಕ್ಷ ಕಣಕ್ಕಿಳಿಸಿದೆ. ವಿನಯ್ ಕುಮಾರ್ ಸೊರಕೆಯವರು ಪಕ್ಷದ ದೊಡ್ಡ ಆಸ್ತಿ, ಕಾರ್ಕಳದಲ್ಲಿ ಅಚ್ಚರಿಯ ಫಲಿತಾಂಶ ನಿರೀಕ್ಷಿಸಲಾಗಿತ್ತು. ಆದರೆ ವ್ಯತಿರಿಕ್ತ ಫಲಿತಾಂಶ ಬಂದಿದೆ ಎಂದು ಡಿ.ಆರ್.ರಾಜು ಹೇಳಿದರು.

ಉದಯಕುಮಾರ್ ಶೆಟ್ಟಿ ಮುಖಂಡತ್ವದಲ್ಲಿ ಕಾರ್ಕಳದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. ದಿವಂಗತ ಗೋಪಾಲ ಭಂಡಾರಿ ಇರುವಾಗ 40000 ಅಂತರದ ಮತಗಳಿಂದ ಸೋಲಾಗಿತ್ತು. ಇವತ್ತು ಕೇವಲ 4000 ಮತಗಳ ಅಂತರದಿಂದಷ್ಟೇ ಸೋಲಾಗಿದೆ ಎಂದ ರಾಜು, ನನಗೆ ಟಿಕೆಟ್ ಸಿಗದೇ ಇದ್ದ ಸಮಯದಲ್ಲಿ ನನ್ನ ಪತ್ನಿ ಅಸಮಾಧಾನಗೊಂಡದ್ದು ನಿಜ. ಅದೇ ವೇಳೆ ಬೇಸರದಲ್ಲಿ ಹಾಕಿದ ಸಂದೇಶ ವೈರಲಾಗಿದೆ. ಆದರೆ ಬಿಜೆಪಿಗೆ ಮತ ಹಾಕಿ ಎಂದು ನಾನು ಹೇಳಿಲ್ಲ ಎಂದವರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಇಂಟಕ್ ಅಧ್ಯಕ್ಷ ಕಿರಣ ಹೆಗ್ಡೆ, ಪ್ರಭಾಕರ್ ಬಂಗೇರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.