ಸಾತ್ವಿಕ್ ರೆಡ್ಡಿ – ಚಿರಾಗ್ ಶೆಟ್ಟಿ ಜೋಡಿಗೆ ಖೇಲ್ ರತ್ನ
ಈ ಬಾರಿಯ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ಕಿರಣ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿಯವರಿಗೆ ನೀಡಲಾಗಿದೆ. ಇದೇ ವೇಳೆ 26 ಮಂದಿ ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ.
ಜಮ್ಮು ಕಾಶ್ಮೀರದ ಶೀತಲ್ ದೇವಿ ಕಾಲಿನಿಂದಲೇ ಬಿಲ್ಲೆಳೆದು ಬಾಣ ಬಿಟ್ಟು ಅಂತರರಾಷ್ಟ್ರೀಯ ಸಾಧನೆ ಮಾಡಿದವರು. ಅವರ ಜೊತೆಗೆ ಮೊಹಮದ್ ಶಮಿ, ಪಾರುಲ್ ಚೌಧರಿ, ನಸ್ರೀನ್, ಪ್ರಾಚಿ ಯಾದವ್, ವೈಶಾಲಿ, ಅದಿತಿ ಎಂದು 26 ಜನ ಅರ್ಜುನ ಪುರಸ್ಕೃತರಾದರು.
ಧ್ಯಾನ್‍ಚಂದ್ ಜೀವಮಾನ ಸಾಧನೆ ಪ್ರಶಸ್ತಿಯು ಮಂಜು ಕನ್ವರ್, ವಿನೀತ್ ಕುಮಾರ್ ಶರ್ಮಾ, ಕವಿತಾ ಸೆಲ್ವರಾಜ್‍ರಿಗೆ ದಕ್ಕಿದೆ. ಐವರು ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿದೆ.