ಮಂಗಳೂರು: ಡಿ.24 ಮತ್ತು 25 ರಂದು ಕೃಷ್ಣಾಪುರದಲ್ಲಿ ಕ್ರಿಕೆಟ್ ಗ್ರೂಪ್ ಹಬ್ಬ

ಕ್ರಿಕೆಟ್ ಗ್ರೂಪ್‌ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರಿಕೆಟ್ ಗ್ರೂಪ್ ಹಬ್ಬ ಎನ್ನುವ ಲೀಗ್ ಮಾದರಿಯ ಪಂದ್ಯಾಕೂಟವು ಡಿ.24 ಮತ್ತು 25 ರಂದು ಕೃಷ್ಣಾಪುರ ಶಾಲಾ ಮೈದಾನದಲ್ಲಿ ನಡೆಯಲಿದೆ.

ಈ ಪಂದ್ಯಾಟದಲ್ಲಿ ಬಿಎಂಆರ್ ಸ್ಟ್ರೈಕರ್‍ಸ್, ರೂಫ್‌ಟೆಕ್, ಕೆಕೆಆರ್ ಕೃಷ್ಣಾಪುರ, ಟ್ರೆಸ್ಕಾನ್, ಜಿ ಗೈಸ್, ಟೀಮ್, ಫಿಫ್ತ್ ಲೆವೆಲ್ ಹೀಗೆ 6 ಮಾಲಕರ ತಂಡದ ಕ್ರಿಕೆಟ್ ಗ್ರೂಪಿನ ಸದಸ್ಯರಿಗೆ ಮಾತ್ರ ಅವಕಾಶವಿದ್ದು, ಪಂದ್ಯಾಟದಲ್ಲಿ ಮ್ಯಾನ್ ಆಫ್ ದ ಮ್ಯಾಚ್, ಮ್ಯಾನ್ ಆಫ್ ದ ಸೀರೀಸ್, ಬೆಸ್ಟ್ ಬೌಲರ್, ಬೆಸ್ಟ್ ಬಾಟ್ಸ್‌ಮ್ಯಾನ್, ಬೆಸ್ಟ್ ಫೀಲ್ಡರ್ ಪ್ರಶಸ್ತಿ ಸಹಿತ ಪಂದ್ಯಾಟದ ವಿನ್ನರ್‌ಗಳಿಗೆ 50000 ರೂ. ನಗದು ಬಹುಮಾನ, ರನ್ನರ್‌ಗಳಿಗೆ 35000 ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಆಕ್ಷನ್ ಪ್ರಕ್ರಿಯೆ ಇಂದು ಸಂಜೆ 4 ಗಂಟೆಗೆ ನಡೆಯಲಿದೆ.

Related Posts

Leave a Reply

Your email address will not be published.