ಕುಂದಾಪುರ :ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ವತಿಯಿಂದ ಕುಂದಾಪುರ- ಬೈಂದೂರು ವಲಯದ ಆತಿಥ್ಯದಲ್ಲಿ 35ನೇ ವರ್ಷದ ಜಿಲ್ಲಾ ವಾರ್ಷಿಕ ಕ್ರೀಡಾಕೂಟ

ಕುಂದೇಶ್ವರ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ವಿವಿಧ ವೇಷಭೂಷಣಗಳು ಒಂದೇ ಸಮವಸ್ತ್ರದೊಂದಿಗೆ ಕುಂದಾಪುರ ನಗರದಲ್ಲಿ ಮೆರವಣಿಗೆ ಮೂಲಕ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕ್ರೀಡಾಕೂಟವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ ಉತ್ತಮವಾದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ವೃತ್ತಿ ಜೊತೆಗೆ ಸಮಾಜ ಮುಖಿ ಕಾರ್ಯಕ್ರಮ ಮಾಡಿಕೊಂಡು ಬಂದಿರುವ ಛಾಯಾಗ್ರಾಹಕರ ಈ ಒಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.ನಂತರ ಬಾನೆತ್ತರಕ್ಕೆ ಬಲೂನ್ ಹಾರಿಸುವ ಮೂಲಕ ಮತ್ತೊಮ್ಮೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ದ. ಕ – ಉಡುಪಿ ಜಿಲ್ಲಾಧ್ಯಕ್ಷ ಪದ್ಮ ಪ್ರಸಾದ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಪ್ರಕಾಶ್ಚಂದ್ರ ಶೆಟ್ಟಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಶುಭ ಹಾರೈಸಿದರು.ಉದ್ಯಮಿ N ರಮೇಶ್ ದೇವಾಡಿಗ ವಂಡ್ಸೆ, ಮಾತನಾಡಿ ಒಂದು ಅದ್ಭುತ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದೀರಿ ಇದು ರಾಜ್ಯಮಟ್ಟದ ಕ್ರೀಡಾಕೂಟವಾಗಿ ಮೂಡಿ ಬಂದಿದೆ ಎಂದರುಕುಂದಾಪುರ ಬೈಂದೂರು ವಲಯದ ಅಧ್ಯಕ್ಷ ದಿವಾಕರ್ ಶೆಟ್ಟಿ, ಅವರು ಮಾತನಾಡಿ ನಮ್ಮ ಕನಸು ನನಸಾದ ದಿನ ಜಿಲ್ಲಾ ಕ್ರೀಡಾಕೂಟ ನಾವು ಈ ಬಾರಿ ನಡೆಸಬೇಕು ಎಂದು ಒಪ್ಪಿಕೊಂಡು ಬಂದಾಗ ನಮಗೆ ಬೆನ್ನೆಲುಬಾಗಿ ನಿಂತು ಪ್ರತಿಯೊಂದು ಕೆಲಸ ಕಾರ್ಯದಲ್ಲಿ ರಾತ್ರಿ ಹಗಲು, ಹೆಗಲಿಗೆ ಹೆಗಲು ಕೊಟ್ಟು ದುಡಿದ ಕುಂದಾಪುರ ವಲಯದ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದಗಳು ಸಮರ್ಪಿಸಿದರು.

ಕ್ರೀಡಾಕೂಟದಲ್ಲಿ ಹಲವಾರು ತಂಡಗಳು ಭಾಗವಹಿಸಿದವು.ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತುಈ ಸಂದರ್ಭದಲ್ಲಿ ಎಸ್. ಕೆ. ಪಿ. ಎ. ದ. ಕ – ಉಡುಪಿ ಜಿಲ್ಲೆಸಂಚಾಲಕ ಕರುಣಾಕರ ಕಾನಂಗಿ, ಎಸ್. ಕೆ. ಪಿ. ಎ. ದ. ಕ – ಉಡುಪಿ ಜಿಲ್ಲೆ ಪ್ರಧಾನ್ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಎಸ್. ಕೆ. ಪಿ. ಎ. ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್. ಕೆ. ಪಿ. ಎ. ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಬಂಟ್ವಾಳ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಂಜಿತ್ ಮೆಂಡನ್, ಭಾರಧ್ವಜ, ಬಾಲಕೃಷ್ಣ ಶೆಟ್ಟಿ, ದಿನೇಶ್ ರಾಯಪ್ಪನ ಮಠ, ಹರೀಶ್ ಪೂಜಾರಿ, ದಿನೇಶ್ ಗೋಡೆ, ನವೀನ್ ಪಿ ಪಿ, ನವೀನ್ ರೈ, ರಾಘು ರಟ್ಟಾಡಿ, ಮೊದಲದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಸುಜಾತ ಮಂಗಳೂರು ಪ್ರಾರ್ಥಿಸಿದರು. ವಲಯಾಧ್ಯಕ್ಷದಿವಾಕರ ಶೆಟ್ಟಿಸ್ವಾಗತಿಸಿದರು. ಎಸ್‌ಕೆಪಿಎ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಂಜಿತ್ ಮೆಂಡನ್ ಪ್ರತಿಜ್ಞಾವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಕೆಪಿಎ ದ.ಕ. ಮತ್ತು ಉಡುಪಿ ಕ್ರೀಡಾ ಕಾರ್ಯದರ್ಶಿ ಭಾರಧ್ವಾಜ್ ವಂದಿಸಿದರು.

Related Posts

Leave a Reply

Your email address will not be published.