ಲೋಕಸಭಾ ಚುನಾವಣೆ: ಉಡುಪಿ ಚಿಕ್ಕಮಗಳೂರಿಗೂ ಸದಾನಂದ ಗೌಡರ ಹೆಸರು
ಮಾಜೀ ಮುಖ್ಯಮಂತ್ರಿ ಸದಾನಂದ ಗೌಡರ ಹೆಸರು ಈಗ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೂ ಕೇಳಿ ಬರುತ್ತಿದೆ. ಅವರು ಹಿಂದೆ ಅಲ್ಲಿ ಸಂಸದರಾಗಿದ್ದರು.
2009ರ ಲೋಕಸಭಾ ಚುನಾವಣೆಯಲ್ಲಿ ಡಿ. ಕೆ. ಸದಾನಂದ ಗೌಡರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಅವರಿಗೆ ದಿಢೀರನೆ ಮುಖ್ಯಮಂತ್ರಿ ಆಗುವ ಅವಕಾಶ ಬಂದುದರಿಂದ ರಾಜೀನಾಮೆ ನೀಡಿದ್ದರು. ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಗೆದ್ದಿದ್ದರು.
ಈಗ ಜಯಪ್ರಕಾಶ್ ಹೆಗ್ಡೆ ಅವರ ಜೊತೆಗೆ ಸದಾನಂದ ಗೌಡರ ಹೆಸರು ಕೂಡ ಈ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಅಲ್ಲದೆ ಡಾ. ಅಂಶುಮತ್, ಸುಧೀರ್ ಕುಮಾರ್ ಮರೋಳಿ ಅವರು ಸಹ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ.