ಮಣಿಪಾಲ: ಮಾಹೇ ವತಿಯಿಂದ ಸಸ್ಯಶ್ಯಾಮಲ: ಗಿಡ ನೆಡುವ ಕಾರ್ಯಕ್ರಮ

ಮಣಿಪಾಲ: ವಿಶ್ವವಿದ್ಯಾಲಯವಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸ್ವಯಂಸೇವಕ ಸಂಸ್ಥೆಯ ವತಿಯಿಂದ ಹಸಿರು ಉಪಕ್ರಮ “ಸಸ್ಯಶ್ಯಾಮಲ”ವನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿರುವ ೬ ನೇ ರಾಷ್ಟ್ರೀಯ ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಕುರಿತ ಸಮ್ಮೇಳನಕ್ಕೆ ಅರ್ಥಪೂರ್ಣ ಮುನ್ನುಡಿಯಾಗಿ ಕಾರ್ಯನಿರ್ವಹಿಸಿತು.

ಈ ಕಾರ್ಯಕ್ರಮವು ಹೆಬ್ರಿ ಹೆದ್ದಾರಿಯಲ್ಲಿರುವ ಶಿವಪುರ ಗ್ರಾಮದಲ್ಲಿ 2ಕಿಲೋಮೀಟರ್ ರಸ್ತೆ ವಿಭಜಕಗಳ ಉದ್ದಕ್ಕೂ 600 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ 110 ಕ್ಕೂ ಹೆಚ್ಚು ಸಮರ್ಪಿತ ವಿದ್ಯಾರ್ಥಿ ಸ್ವಯಂಸೇವಕರನ್ನು ಒಟ್ಟುಗೂಡಿಸಿತು. ಈ ನಡುತೋಪು ಅಭಿಯಾನವು “ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯನ್ನು ಮುನ್ನಡೆಸುವುದು” ಎಂಬ ಸಮ್ಮೇಳನದ ಥೀಮ್ ಆಗಿದೆ.

ಮಾಹೆಯ ವಿಎಸ್‌ಒ ಮುಖ್ಯ ಸಂಯೋಜಕರಾದ ಡಾ. ಅಭಿಷೇಕ್ ಚತುರ್ವೇದಿ ಅವರು ವಿವಿಭ ವಿಭಾಗಗಳು ಮತ್ತು ಶೈಕ್ಷಣಿಕ ಹಂತಗಳ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡ ಸಮಗ್ರ ನಡುತೋಪು ಅಭಿಯಾನವನ್ನು ಸಂಯೋಜಿಸಿದರು.