ಮಂಗಳೂರು: ರನ್ನರ್ಸ್ ಕ್ಲಬ್ ವತಿಯಿಂದ ನೀವಿಯಸ್ ಮಂಗಳೂರು ಮ್ಯಾರಥಾನ್-2025 ಯಶಸ್ವಿ

ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ವರ್ಟೆಕ್ಸ್ ಸಹಯೋಗದಲ್ಲಿ ನೀವಿಯಸ್ ಮಂಗಳೂರು ಮ್ಯಾರಥಾನ್-2025 ನಾಲ್ಕನೇ ಆವೃತ್ತಿಯ ಮ್ಯಾರಥಾನ್ ಮಂಗಳೂರಿನಲ್ಲಿ ನಡೆಯಿತು. ಇದು ಅತೀ ದೊಡ್ಡ ಮ್ಯಾರಥಾನ್ ಆಗಿದ್ದು, ಅಂತರರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗಳು ಭಾಗವಹಿಸಿದ್ದರು. ವಿವಿಧ ವಿಭಾಗದಲ್ಲಾಗಿ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಈ ಮ್ಯಾರಥಾನ್ ಪಾಲ್ಗೊಂಡಿದ್ದರು.

ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ವರ್ಟೆಕ್ಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೀವಿಯಸ್ ಮಂಗಳೂರು ಮ್ಯಾರಥಾನ್-2025 ಹಮ್ಮಿಕೊಂಡಿದ್ದು, ಬೆಳಗ್ಗೆ ೩.೪೫ರಿಂದ ಮ್ಯಾರಥಾನ್ ಆರಂಭಗೊಂಡಿತ್ತು. ಮ್ಯಾರಥಾನ್ ಮಂಗಳ ಕ್ರೀಡಾಂಗಣದಿಂದ ಆರಂಭವಾಗಿ ತಣ್ಣೀರುಬಾವಿ ಬೀಚ್ ವರೆಗೆ ನಡೆಯಿತು.

ಪೂರ್ಣ ಮ್ಯಾರಥಾನ್ 42.2 ಕಿ.ಮೀ., 20 ಮೈಲರ್ (32ಕಿ.ಮೀ.), ಹಾಫ್ ಮ್ಯಾರಥಾನ್ (21.1.ಕಿ.ಮೀ.), 10 ಕಿ.ಮೀ. ಓಟ, 5 ಕಿ.ಮೀ. ಓಟ,2 ಕಿ.ಮೀ. ಗಮ್ಮತ್ ಓಟ, ಯೆನೆಪೋಯ ವರ್ಲ್ಡ್ ಸ್ಕೂಲ್ ವಿದ್ಯಾರ್ಥಿ ಓಟ 10ಕಿ.ಮಿ/ ೫ ಕಿ.ಮೀ. ಓಟ ಎಂಬ ನಾನಾ ವಿಭಾಗಳಲ್ಲಿ ಮ್ಯಾರಥಾನ್ ನಡೆಯಿತು.

8 ವರ್ಷದಿಂದ 80 ವರ್ಷ ವಯಸ್ಸಿನ ಓಟಗಾರರು ಭಾಗವಹಿಸಿದ್ದು, ಸುಮಾರು 6 ಸಾವಿರದಷ್ಟು ಮಂದಿ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಸಂಸದ ಬ್ರಿಜೇಶ್ ಚೌಟ ಅವರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಮ್ಯಾರಥಾನ್ ರೇಸ್ ನಿರ್ದೇಶಕಿ ಮೆಹ್ವಿಶ್ ಹುಸೇನ್ , ನೀವಿಯಸ್ ಸೊಲ್ಯೂಷನ್ಸ್ ನಿರ್ದೇಶಕರಾದ ಅಜಯ್ ಪ್ರಭು, ಲುವ್ಲಿನ್ ಡಿಸೋಜ, ಯೆನೆಪೋಯ ವರ್ಲ್ಡ್ ಸ್ಕೂಲ್ ನ ಪ್ರಿನ್ಸಿಪಾಲ್ ಅಂಥೋನಿ ಜೋಸೆಫ್ , ವರ್ಟೆಕ್ಸ್ ನ ಗುರುದತ್ತ ಶೆಣೈ ಕ್ಲಬ್ ನ ಅಧ್ಯಕ್ಷ ಜೋಯಲ್ ರೆಬೆಲ್ಲೋ ಮೊದಲಾದವರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.