ಮೆಸ್ಕಾಂ ಕಾಪು ವಿಭಾಗದ ವತಿಯಿಂದ ಕಾಪು ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ
ಕಾಪು ಪುರಸಭೆ, ಕಾಪುಗ್ರಾಮ ಪಂಚಾಯತ್ ಬೆಳಪು/ಮಜೂರು/ಶಿರ್ವ/ಕಟಪಾಡಿ/ಕೋಟೆಬಡಾ/ಕುತ್ಯಾರು/ಎಲ್ಲೂರು, ಕುರ್ಕಾಲು/ಮುದರಂಗಡಿ/ಇನ್ನಂಜೆ ತೆಂಕ ಎರ್ಮಾಳು/ಹೆಜಮಾಡಿ/ಪಲಿಮಾರು/ಪಡುಬಿದ್ರಿ ನೇತೃತ್ವದಲ್ಲಿ ದಿನಾಂಕ 20.12.2025 ರಂದು ಮೆಸ್ಕಾಂ ಕಾಪು ವಿಭಾಗದ ವತಿಯಿಂದ ಕಾಪು ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ.
ದಿನಾಂಕ 20.12.2025 ರಂದು ಸಮಯ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಮೆಸ್ಕಾಂ ನಿಯಮಿತ ಕಾಪು ಉಪವಿಭಾಗದ ವತಿಯಿಂದ ಕಾಪು ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ ನಡೆಸಲು ಉದ್ದೇಶಿಸಿದ್ದು ಈ ಸಭೆಯಲ್ಲಿ ಮೆಸ್ಕಾಂ ನ ಅಧಿಕಾರಿಗಳು ಭಾಗವಹಿಸಲಿದ್ದು, ಈ ಸಭೆಯಲ್ಲಿ ಕಾಪು ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ನೀಡುವ ಮೂಲಕ ಅವಕಾಶದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಹಾಗೂ ಅರವಿಂದ ಕೆ.ಎಸ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.). ಮೆಸ್ಕಾಂ ನಿಯಮಿತ, ಕಾ. ಮತ್ತು ಪಾ. ಉಪ ವಿಭಾಗ, ಕಾಪು ಇವರನ್ನು ಈ ಕೆಳಕಂಡ ನಂಬರಿನ ಮೂಲಕ ಸಂಪರ್ಕಿಸ ಬಹುದಾಗಿದೆ ದೂರವಾಣಿ ಸಂಖ್ಯೆ:9448289498).


















