ಮೂಡುಬಿದಿರೆ : ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ: ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪುರಸಭೆಯ ನೇತೃತ್ವದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಸ್ವರಾಜ್ಯ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಮುಖ್ಯಾಧಿಕಾರಿ ಶಿವ ನಾಯ್ಕ್ ಪ್ರತಿಜ್ಞಾವಿಧಿ ಬೋಧಿಸಿದರು. ಪರಿಸರ ಅಭಿಯಂತರೆ ಶಿಲ್ಪಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ- 2.0 ಯೋಜನೆಯಡಿ ನನ್ನ ಲೈಫ್ ನನ್ನ ಸ್ವಚ್ಛ ನಗರದ ಪರಿಕಲ್ಪನೆಯೊಂದಿಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಕಸ ಸಂಗ್ರಹಿಸುವಾಗಲೇ ಮೂರು ವಿಧದಲ್ಲಿ ಕಸ ವಿಂಗಡಣೆಯನ್ನು ಮಾಡಲಿದ್ದೇವೆ. ಮರುಬಳಕೆ ಆಗುವ ವಸ್ತುಗಳು, ಅಪಾಯಕಾರಿ ವಸ್ತುಗಳು, ಮರುಬಳಕೆಯಾಗದ ವಸ್ತುಗಳನ್ನು ಪ್ರತ್ಯೇಕವಾದ ಚೀಲಗಳಲ್ಲಿ ಹಾಕಲಾಗುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಈ ಅಭಿಯಾನಕ್ಕೆ ಮೂಡುಬಿದಿರೆಯ ವಿವಿಧ ಶಿಕ್ಷಣ ಸಂಸ್ಥೆಗಳು ಕೈಜೋಡಿಸಿವೆ ಎಂದರು.

ಸ್ವಚ್ಛತಾ ರಾಯಭಾರಿ ಗೋಪಾಲ್, ಆಳ್ವಾಸ್ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಮಯ್ಯ, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಕ್ಷಿತಾ ಕುಮಾರಿ ತೋಡಾರು, ಮನಃಶಾಸ್ತ್ರ ಉಪನ್ಯಾಸಕಿ ಅಶ್ವಥಿ, ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯಾ

ಅಭಿಯಾನದ ಮೊದಲ ದಿನ ಆಳ್ವಾಸ್ ಪದವಿ ಕಾಲೇಜಿನ ಮಾನವಿಕಶಾಸ್ತ್ರ ವಿಭಾಗದ 80 ಮಂದಿ ವಿದ್ಯಾರ್ಥಿಗಳು ಹಾಗೂ 44 ಮಂದಿ ಪೌರ ಕಾರ್ಮಿಕರು ಸ್ವರಾಜ್ಯ ಮೈದಾನದಿಂದ ವಿದ್ಯಾಗಿರಿ ಜಂಕ್ಷನ್‍ವರೆಗೆ ಸ್ವಚ್ಛತೆಯನ್ನು ಮಾಡಿದರು.

Related Posts

Leave a Reply

Your email address will not be published.