ಮೂಡುಬಿದಿರೆ ಪುರಸಭೆಯ ಅಧಿವೇಶನ : ಹಸಿಕಸ ವಿಲೇವಾರಿಯಲ್ಲಿ ಅಡಚಣೆ

ಮೂಡುಬಿದರೆ : ವಸತಿ ಸಮುಚ್ಛಯಗಳಲ್ಲಿನ ಹಸಿಕಸವನ್ನು ಹಂದಿ ಸಾಕಾಣಿಕೆಗಾರರಿಗೆ ರವಾನಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಎರಡು ಮೂರು ಬಾರಿ ಅಡಚಣೆಯಾಗಿದ್ದು ಇದರಿಂದಾಗಿ ತ್ಯಾಜ್ಯ ದಲ್ಲಿ ಹುಳುಗಳಾಗಿರುವದರಿಂದ ತ್ಯಾಜ್ಯ ಸಂಗ್ರಹವಾಗಿಲ್ಲ, ವಿಲೇವಾರಿ ಮಾಡುವವರಿಗೆ ತಿಳಿಸಿದರೆ ಅವರು ಪುರಸಭೆಯ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳುತ್ತಾರೆ. ಹಾಗಾದರೆ ಪುರಸಭೆಯ ಸದಸ್ಯರಾಗಿರುವ ನಮಗೆ ಗೌರವವಿಲ್ಲವೇ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ 23ಕೋಟಿಯಷ್ಟು ಹಣವನ್ನು ನಾನು ಸುಪ್ರಿಂ ಕೋರ್ಟಿಗೆ ಕಟ್ಟಬೇಕಾಗುತ್ತದೆ.

ವಸತಿ ಸಮುಚ್ಛಯಗಳಲ್ಲಿರುವವರೇ ಇದಕ್ಕೆ ಜವಾಬ್ದಾರರು ಅಲ್ಲದೆ ಅಲ್ಲಿನ ತ್ಯಾಜ್ಯ ವಿಲೇವಾರಿ ಮಾಡಲು ಬೇರೆಯವರಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಹೀಗಾದರೆ ಇದಕ್ಕೆ ಹೊಣೆ ಯಾರು? ಎಂದು ಸದಸ್ಯೆ ಸ್ವಾತಿ ಪ್ರಭು ಬುಧವಾರ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿ ಪರಿಸರ ಅಭಿಯಂತರೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಒಂದು ವೇಳೆ ಹಂದಿ ಸಾಕಾಣಿಕೆಗಾರರು. ಯಾವುದೋ ಸಮಸ್ಯೆಯಿಂದ 10 ದಿನಗಳ ಕಾಲ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ ಬೇರೇನು ಮಾಡುವುದೆಂದು ಆಡಳಿತ ಪಕ್ಷದ ಸದಸ್ಯ ರಾಜೇಶ್ ನಾಯ್ಕ ಸಂಶಯ ವ್ಯಕ್ತ ಪಡಿಸಿದರು. ತ್ಯಾಜ್ಯ ವಿಲೇವಾರಿಗೆ ವರ್ಷಕ್ಕೆ ಸುಮಾರು 1,60 ಕೋಟಿ ರೂಪಾಯಿಯಷ್ಟು ಪುರಸಭೆ ವ್ಯಯಿಸುತ್ತದೆ. ಹೀಗಾಗಿ ಸದಸ್ಯರೆಲ್ಲರೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಮನವಿ ಮಾಡಿದ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆಯನ್ನು ನೀಡಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತಿಯಲ್ಲಿ ಘನತ್ಯಾಜ್ಯದಿಂದ ಗರಿಷ್ಠ ಆದಾಯ ಗಳಿಸುತ್ತಿರುವಾಗ ಪುರಸಭೆ ವ್ಯಾಪ್ತಿಯ ರಾಜ್ಯ ಘಟಕದಿಂದ ಆದಾಯ ಬಾರದಿರಲು ಕಾರಣವೇನು ಎಂದು ಸದಸ್ಯ ದಿನೇಶ್ ಪೂಜಾರಿ ಪ್ರಶ್ನಿಸಿದರು. ಕರಿಂಜೆಯಲ್ಲಿರುವ ರಾಜ್ಯ ಘಟಕದಿಂದ ಆದಾಯ ವೃದ್ಧಿಗೆ ಅಧಿಕಾರಿಗಳು ಗಮನಹರಿಸಬೇಕು. ನಿರ್ವಹಣೆಯ ಲೆಕ್ಕಾಚಾರಗಳು ಸಮರ್ಪಕವಾಗಿರಬೇಕು. ಮುಂದಿನ ಆರು ತಿಂಗಳೊಳಗೆ ಈ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಆಡಳಿತ, ವಿಪಕ್ಷ ಸದಸ್ಯರು ಆಗ್ರಹಿಸಿದರು. ಅವ್ಯವಹಾರ ಅನುಮಾನಗಳು ಮೂಡುತ್ತಿದೆ. ಎಂದು ಸದಸ್ಯ ಸುರೇಶ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಆರು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸುವಂತೆ ಸದಸ್ಯ ಪಿ.ಕೆ ಥೋಮಸ್ ಪರಿಸರ ಇಂಜಿನಿಯರ್‍ಗೆ ಸೂಚಿಸಿದರು.

bhಜಾತಿ ಮತ್ತು ಪಂಗಡದ ಮೀಸಲು ಅನುದಾನದಡಿ ನಡೆಯುವ ಕಾಮಗಾರಿಗೆ ಕರೆದ ಗುತ್ತಿಗೆದಾರ ಪೈಕಿ ಗುತ್ತಿಗೆದಾರರೊಬ್ಬರ ಟೆಂಡರ್ ನ್ನು ತಾಂತ್ರಿಕ ಕಾರಣಗಳಿಂದ ಪುರಸಭೆ ಅನರ್ಹಗೊಳಿಸಿರುವುದನ್ನು ಸದಸ್ಯ ಕೊರಗಪ್ಪ ಆಕ್ಷೇಪಿಸಿ ಮರುಟೆಂಡರ್ ಗೆ ಆಗ್ರಹಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅನರ್ಹ ಗುತ್ತಿಗೆದಾರರ ಮೇಲೆ ಅಷ್ಟೊಂದು ಪ್ರೀತಿ ಇರುವ ಮರ್ಮವೇನು ಎಂದು ಪ್ರಶ್ನಿಸಿದರು. ಅಭಿವೃದ್ಧಿಯನ್ನು ಬಯಸುವ ನೀವು ನಿರ್ಣಯಗಳಿಗೆ ಅಡ್ಡಿ ಉಂಟು ಮಾಡುವ ಮೂಲಕ ಅಭಿವೃದ್ಧಿಗೆ ತೊಡಕು ಮಾಡುತ್ತಿದ್ದಿರಿ ಎಂದು ಆಡಳಿತ ಪಕ್ಷ ಸದಸ್ಯರು ಪ್ರತಿಕ್ರಿಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸುಜಾತ, ಮುಖ್ಯಾಧಿಕಾರಿ ಇಂದು ಎಂ, ಪುರಸಭೆ ಇಂಜಿನಿಯರ್ ಪದ್ಮನಾಭ ಎಂ, ಪರಿಸರ ಅಭಿಯಂತರೆ ಶಿಲ್ಪಾ ಎಸ್, ಪ್ರಥಮ ದರ್ಜೆ ಸಹಾಯಕಿ, ಮೀನಾಕ್ಷಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.