ನಾಗೂರು: ಕನ್ನಡ ರಾಜ್ಯೋತ್ಸವ ಸಂಭ್ರಮ

ಕನ್ನಡ ರಾಜ್ಯೋತ್ಸವ 2025ರ ಪ್ರಯುಕ್ತ ಕನ್ನಡ ಹಬ್ಬ ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ಸಂಭ್ರಮ ನಡೆಯಿತು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ದೀಪ ಬೆಳಗಿಸಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪರ್ಚಾಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕನ್ನಡ ನಾಡಿನ ನೆಲ ಜಲದ ರಕ್ಷಣೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದ ಅವರು, ವ್ಯವಹಾರಿಕಾವಾಗಿ ಇತರ ಭಾಷೆಗಳನ್ನು ಬಳಸಿದರೂ ಕನ್ನಡ ಭಾಷೆಯನ್ನು ನಾವು ಯಾವತ್ತೂ ಮರೆಯಬಾರದು ಎಂದರು.


ಕಾರ್ಯಕ್ರಮದ ಸಂಪೂರ್ಣ ಆಯೋಜಕರಾದ ರಾಘವೇಂದ್ರ ನಾಗೂರು ಅವರು ಮಾತನಾಡಿ ಕಳೆದ ವರ್ಷಕ್ಕಿಂತ ಈ ವರ್ಷ ಬಹಳ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಿದ್ದೇವೆ ಈ ಕಾರ್ಯಕ್ರಮಕ್ಕೆ ಹಲವಾರು ಜನ ಸಹಕರಿಸಿದ್ದಾರೆ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸಿದರು.

ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ,ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು ವಿಜೇತರಿಗೆ ಬಹುಮಾನ ವಿಪರಿಸಲಾಯಿತು

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದನಿವೃತ್ತ ಶಿಕ್ಷಕರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು ಶೈಕ್ಷಣಿಕ ಸಾಧಕ ವಿಧ್ಯಾರ್ಥಿಗಳು,
ಕ್ರೀಡಾ ಸಾಧಕ ವಿಧ್ಯಾರ್ಥಿಗಳು, ವಿಶೇಷ ಸಾಧಕ ವಿದ್ಯಾರ್ಥಿಗಳು ಹಾಗೂ ನಾಟಿ ವೈದ್ಯರು,ನವಮಿ ಡಾಟ್ ಕಾಮ್ ಕೊಡೇರಿ ಇವರಿಗೆ ಸನ್ಮಾನಿಸಿದ ಗೌರವಿಸಲಾಯಿತು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಹಾಬಲ .ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು

ಈ ಸಂದರ್ಭದಲ್ಲಿ ಸುಧಾಕರ್ ಶೆಟ್ಟಿ ಮೆಸ್ಕಾಂ ಅಧಿಕಾರಿ, ಅಣ್ಣಪ್ಪ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಯೋಗೇಶ್ ಕಿರಿಮಂಜೇಶ್ವರ ಅಧಿಕಾರಿಗಳು ನಗರಸಭೆ ಉಡುಪಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ಬಣ್ಣ ಶೆಟ್ಟಿ,ಸರಸ್ವತಿ,ಜಯಲಕ್ಷ್ಮಿ
ಚಿತ್ತಾರ ಡಿಜಿಟಲ್ ಗಣೇಶ್ ದೇವಾಡಿಗ ,ಎಂ.ಎಚ್ ಉಬೈದುಲ್ಲಾ ನಾಗುರೂ, ಚಿತ್ರನಟ ಶ್ರೀಯುತ ರಾಜೇಶ್, ಶ್ರೀಮತಿ ನಾಗರತ್ನ

ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ದೇಶಕರು
ಶ್ರೀ ರಾಘವೇಂದ್ರ ನಾಗೂರು ಸ್ವಾಗತಿಸಿದರು

ಸಂಪನ್ಮೂಲ ವ್ಯಕ್ತಿಶ್ರೀ ದಿನೇಶ ವಿ ಮುಖ್ಯ ಶಿಕ್ಷಕರು, ಸ.ಕಿ.ಪ್ರಾ ಶಾಲೆ, ಅಜ್ರಗದ್ದೆ ಕಾರ್ಯಕ್ರಮ ನಿರೂಪಿಸಿದರು

ಸಂಪನ್ಮೂಲ ವ್ಯಕ್ತಿಶ್ರೀ ಶೇಖರ ದೇವಾಡಿಗ ಬಿ ಶಿಕ್ಷಕರು, ಸ.ಕಿ.ಪ್ರಾ ಶಾಲೆ, ಬಲಗೋಣ ವಂದಿಸಿದರು

Related Posts

Leave a Reply

Your email address will not be published.