ಪಡುಬಿದ್ರಿ: ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣು
ಪಡುಬಿದ್ರಿ: ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣಪತ್ನಿಯನ್ನು ಕಳೆದುಕೊಂಡ ಬಳಿಕ ಕಿನ್ನತೆ ಅನುಭವಿಸುತ್ತಿದ್ದ ವ್ಯಕ್ತಿಯೊರ್ವರು ತನ್ನ ವಾಸದ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಅವರಾಲು ಮಟ್ಟುವಿನಲ್ಲಿ ಘಟಿಸಿದೆ.ಮೃತ ವ್ಯಕ್ತಿ ಅವರಾಲು ಮಟ್ಟು ಕರಿಯ ಹೌಸ್ ನಿವಾಸಿ ಅಶೋಕ್ ಪೂಜಾರಿ (48), ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಇವರಿಗೆ ಇಬ್ಬರು ಮಕ್ಕಳು, ಪತ್ನಿ ಕಳೆದ ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಸಾವಿನ ಬಳಿಕ ಕಿನ್ನತೆ ಅನುಭವಿಸುತ್ತಿದ್ದ ಇವರು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಪಕ್ಕಾಸಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮಕ್ಕಳಿಬ್ಬರನ್ನು ಅನಾಥರನ್ನಾಗಿ ಮಾಡಿ ಇಹ ಲೋಕ ತ್ಯಜಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















