ಪಡುಬಿದ್ರಿ: ಎರಡು ತಂಡಗಳ ಮಧ್ಯೆ ವಾಗ್ವಾದ – ಚೂರಿಯಿಂದ ಇರಿತ

ಕೆಲ ಸಮಯದ ವಿರಾಮದ ಬಳಿಕ ಮತ್ತೆ ತಂಡಗಳ ಮಧ್ಯೆ ವಾಗ್ವಾದ ನಡೆದು ಚೂರಿಯಿಂದ ಇರಿದ ಘಟನೆ ತಡರಾತ್ರಿ ಪಡುಬಿದ್ರಿ ಪೇಟೆ ಸಮೀಪದ ದುರ್ಗಾ ಜುವ್ಯೆಲ್ಲರಿ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಸೂರಜ್, ಶರತ್, ತನುಜ್, ಅನೀಷ್ ಆರೋಪಿಗಳು.
ಚೂರಿ ಇರಿತಕ್ಕೊಳಗಾದವರು ಸುಜಿತ್, ಗಾಯಾಳುವಿನ ಸಹೋದರ ಅಜಿತ್ ಹಾಗೂ ಸ್ನೇಹಿತ ಕರಣ್ ರೊಂದಿಗೆ ಪಕ್ಕದ ಪ್ರಣವ್ ಎಂಬವರ ಹೋಟೆಲ್ ಗೆ ಬಂದಿದ್ದು, ರಸ್ತೆಯಂಚಿನಲ್ಲಿ ಕಾರು ಇಲ್ಲಿಸಿದ್ದು , ಇನೋವ ಕಾರಿನಲ್ಲಿ ಸ್ಥಳಕ್ಕೆ ಬಂದ ಆರೋಪಿಗಳು ಕಾರು ನಿಲ್ಲಿಸಿ ಸುಜಿತ್ ಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿಗಳ ಪೈಕಿ ಸೂರಜ್ ಹಾಗೂ ತನುಜ್ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದು, ಅದೇ ವೇಳೆ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಅನಿಷ್ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದಾಗ ಸೂರಜ್ ಕತ್ತಿಯಿಂದ ಹಾಗೂ ಶರತ್ ಡ್ರಾಗನ್ ನಿಂದ ಹಲ್ಲೆ ನಡೆಸಿದ್ದು ಎದೆಗೆ ಡ್ರಾಗನ್ ಚುಚ್ಚಲು ಯತ್ನಿಸಿದಾಗ ಸುಜಿತ್ ಕೈಯಿಂದ ತಡೆದಿದ್ದರಿಂದ ಕೈಗೆ ಗಾಯವಾಗಿದೆ. ಅಲ್ಲಿಂದ ಅಪಾಯದ ಅರಿವಾಗಿ ಸುಜಿತ್ ಅಲ್ಲಿಂದ ಓಡಿದಾಗ ಸೂರಜ್ ಹಾಗೂ ಶರತ್ ಅಟ್ಟಿಸಿಕೊಂಡು ಹೋಗಿದ್ದು, ಅವರನ್ನು ತಡೆಯಲು ಹೋದ ಇರಿತಗೊಳಗಾದ ಸುಜಿತ್ ಸಹೋದರ ಅಜಿತ್ ಗೂ ಕತ್ತಿ ಬೀಸಿದ ಆರೋಪಿಗಳು ಜೀವ ಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ಅಜಿತ್ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
