ಪಡುಬಿದ್ರಿ: ಜುಲೈ 27ರಂದು ಆಟಿಡೊಂಜಿ ಕೂಟ ಕಾರ್ಯಕ್ರಮ

ಪಡುಹಿತ್ತು ಶ್ರೀ ಜಾರಂದಾಯ ದೈವಸ್ಥಾನ ಸೇವಾ ಸಮಿತಿ (ರಿ.) ಪಡುಬಿದ್ರಿ ಮಹಿಳಾ ಮಂಡಳಿ ಮತ್ತು ಪಡುಹಿತ್ಲು ಜವನೆರ್ ಇವರ ಆಶ್ರಯದಲ್ಲಿ
ದಿನಾಂಕ : 27-07-2025ನೇ ಆದಿತ್ಯವಾರದಂದು ಆಟಿಡೊಂಜಿ ಕೂಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಆಟೋಟ ಸ್ಪರ್ಧೆಗಳು, ವಿದ್ಯಾರ್ಥಿ ಪ್ರೋತ್ಸಾಹ ಧನ, ಮಹಿಳೆಯರಿಂದ ವಿವಿಧ ರೀತಿಯ ತಿಂಡಿ ತಿನಿಸುಗಳು ಹಾಗೂ ಪಡುಹಿತ್ಲು ಜವನೆರ್ ರಿಂದ ಆಟಿದ ವನಸ್ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಶ್ರೀ ಸುಧಾಕರ ಪೂಜಾರಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಪಾಂಗಳ ಇವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ,
ಮುಖ್ಯ ಅತಿಥಿಗಳಾಗಿ, ಸುಧಾಕರ್ ಬಂಡ್ರಿಯಾಲ್, ಬಿ. ನಾಗರಾಜ್ (ನ್ಯಾಯಾವಾದಿ, ಉಡುಪಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹಾಗೂ ಉಮೇಶ್ ಮಲ್ಲರ್ ತೋಟ ಮತ್ತು ಶ್ರೀಮತಿ ಶಶಿಕಲಾ ಪೂಜಾರಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ಪಡುಹಿತ್ತು ಶ್ರೀ ಜಾರಂದಾಯ ದೈವಸ್ಥಾನ ಸೇವಾ ಸಮಿತಿ (ರಿ.) ಪಡುಬಿದ್ರಿ ಮಹಿಳಾ ಮಂಡಳಿ ಮತ್ತು ಪಡುಹಿತ್ಲು ಜವನೆರ್ ಕಾರ್ಯಕ್ರಮಕ್ಕೆ ಆಗಮಿಸಲು ಪ್ರೀತಿಪೂರ್ವಕವಾಗಿ ವಿನಂತಿಸಿದ್ದಾರೆ.