ಪಡುಬಿದ್ರಿ: ಕೃಷಿ ಬದುಕು ಹತ್ತಿರವಾಗಲು ಇಂಥಹ ಕೃಷಿ ಮೇಳಗಳು ಪೂರಕ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಬದುಕಿನ ಬಂಡಿ ಸಾಗಿಸುವ ನಿಟ್ಟಿನಲ್ಲಿ ಜೊಳಿಗೆ ಹಾಕಿಕೊಂಡು ಉದ್ಯೋಗ ಹರಸಿ ಹೊರ ದೇಶ ಹೊರ ರಾಜ್ಯಕ್ಕೆ ವಲಸೆ ಹೋದವರು ಅದೆಷ್ಟೋ ಮಂದಿ… ಆದರೆ ಕೊರೋನ ಎಂಬ ರೋಗ ನಮ್ಮನ್ನು ತಾತ್ಕಾಲಿಕವಾಗಿ ಹತ್ತಿರ ತಂದರೂ ಮತ್ತೆ ಅದೇ ಸ್ಥಿತಿ, ಇದೀಗ ಇಂಥಹ ಕೃಷಿ ಮೇಳಗಳನ್ನು ಆಯೋಜಿಸುವ ಮೂಲಕ ಕೃಷಿ ಬದುಕು ಮತ್ತೆ ಹತ್ತಿರವಾಗಲು ಸಾಧ್ಯ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಪಡುಬಿದ್ರಿಯಲ್ಲಿ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಕೃಷಿಯಲ್ಲಿ ಸಾಧನೆ ಮಾಡಿದ ಹೆಜಮಾಡಿ ದೇವಾನಂದ ಪೂಜಾರಿ, ಶಿವರಾಮ್ ಶೆಟ್ಟಿ, ಶರಾವತಿ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ, ಸಾಂತೂರು ಭೋಜ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜೈನಮಠ ಮಾಡಬಿದರೆಯ ಶ್ರೀಗಳಾದ ಜಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಆಶಿವರ್ಚನ ನೀಡಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಕೃಷಿ ಮೇಳದ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಅದಾನಿ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಆಳ್ವ, ಪಡುಬಿದ್ರಿ ಠಾಣಾ ಪಿಎಸ್ ಐ ಪ್ರಸನ್ನ ಎಂ.ಎಸ್, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ ಸುಧೀರ್ ಕುಮಾರ್, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲ ಪೂಜಾರಿ, ಕೃಷಿ ಅಧಿಕಾರಿ ಮೋಹನ್ ರಾಜ್, ತೋಟಗಾರಿಕಾ ಅಧಿಕಾರಿ ಹೇಮಂತ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಾಯೇಶ್ವರ ಪೈ, ಮೋಹನ್ ಪೂಜಾರಿ ಉಪಸ್ಥಿತರಿದ್ದರು.