ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆ ವಿಪ್ರ ಸಂಘಟನೆಗಳಿಂದ ಶಿವ ಪಂಚಾಕ್ಷರೀ ಜಪಾನುಷ್ಟಾನ

ಪಡುಬಿದ್ರಿ,:ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳು ನಿರ್ವಿಘ್ನವಾಗಿ, ಯಶಸ್ವಿಯಾಗಿ, ಆತೀ ಶೀಘ್ರವಾಗಿಯೇ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಚಾಲನೆ ನೀಡಲಾಗಿರುವ ಏಕಾದಶಕೋಟಿ ಶಿವಪಂಚಾಕ್ಷರೀ ಮಂತ್ರದ ಜಪಾನುಷ್ಟಾನವು ರವಿವಾರದಂದು ಪಡುಬಿದ್ರಿ ಶ್ರೀ ದೇಗುಲದ ಬಾಲಾಲಯದಲ್ಲಿ ಉಭಯ ಜಿಲ್ಲೆಗಳ ವಿವಿಧ ವಿಪ್ರ ಸಂಘಟನೆಗಳಿಂದ ಸೂರ್ಯೋದಯದಿಂದ ಸೂಯಾಸ್ತದವರೆಗೆ ನಡೆಯಿತು.

ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಸ್ಥಾನದ ಅರ್ಚಕ ಹೆಜಮಾಡಿ ಪದ್ಮನಾಭ ಭಟ್ ಅವರ ದೇವತಾ ಪ್ರಾರ್ಥನೆಯೊಂದಿಗೆ ಈ ಕುರಿತಾದ ವಿಽಗಳು ಆರಂಭಗೊಂಡವು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವೇ| ಮೂ| ಕೆ. ರಾಜಗೋಪಾಲ ಉಪಾಧ್ಯಾಯ ಅವರು ಮಾತನಾಡಿ, ರುದ್ರ ದೇವರ ಪ್ರೀತ್ಯರ್ಥವಾಗಿ ನಡೆಯುವ ಈ ಜಪ ಯಜ್ಞದಲ್ಲಿ ಬ್ರಾಹ್ಮಣ ವಲಯಗಳ ಸದಸ್ಯರೆಲ್ಲರ ಜತೆಗೂಡಿ ದಿನವಿಡೀ ಪಂಚಾಕ್ಷರೀ ಜಪವನ್ನು ಭಗವಂತನ ಏಕಾದಶ ರೂಪದ ಚಿಂತನೆಯೊಂದಿಗೆ ಗ್ರಾಮ ದೇಗುಲದ ಪುನರ್ ನಿರ್ಮಾಣದ ಕಾರ್ಯಸಿದ್ಧಿಗಾಗಿ ನಡೆಸಲಾಗುತ್ತಿದೆ ಎಂದರು.
ಆ ಬಳಿಕ ನೆರೆದಿದ್ದ ಉಡುಪಿಯ ತಾ| ಬ್ರಾಹ್ಮಣ ಮಹಾಸಭಾ(ರಿ) ಸದಸ್ಯರ ಜತೆಗೂಡಿ ಪಡುಬಿದ್ರಿಯ ವಿಪ್ರರು ಸಂಕಲ್ಪ ಪೂರ್ವಕವಾಗಿ ಶಿವ ಪಂಚಾಕ್ಷರೀ ಮಂತ್ರ ಜಪವನ್ನು ಆರಂಭಿಸಿದರು. ಸೂಯಾಸ್ತದವರೆಗೂ ಈ ಮಂತ್ರ ಜಪವು ಸಾಗಿತ್ತು.
ಶ್ರೀ ದೇಗುಲದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಶ್ರೀ ಕೃಷ್ಣಾಪುರ ಶಾಖಾ ಮಠದ ವೇ| ಮೂ| ಶ್ರೀನಿವಾಸ ಉಪಾಧ್ಯಾಯ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ(ರಿ)ದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಉಡುಪಿ ತಾ| ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಜನಾರ್ದನ ಶರ್ಮ, ಬಾಲಕೃಷ್ಣ ಕೊರ್ನಾಯ, ಸದಾಶಿವ ಆಚಾರ್ಯ, ರಮಾಕಾಂತ ರಾವ್, ಯಾದವೇಂದ್ರ ಉಪಾಧ್ಯಾಯ, ಶ್ರೀಧರ ಆಚಾರ್ಯ, ರಾಜೇಶ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.