ಅಲೋಶಿಯಸ್ ವಿವಿಯ ನಿವೇದಿತ ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಶಾಸ್ತ್ರ ಶಾಲೆಯ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಿವೇದಿತರವರು ಮಂಡಿಸಿದ “Impact of Large-scale Retailing on Consumers and Small Traders: A Study with Reference to Dakshina Kannada District” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ.

ಇವರು ಯುನಿವರ್ಸಿಟಿ ಕಾಲೇಜು ಮಂಗಳೂರಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. (ಡಾ) ಯತೀಶ್ ಕುಮಾರ್ ಅವರ ಯಶಸ್ವಿ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.

ಶ್ರೀಮತಿ ನಿವೇದಿತ ರವರು ಯೆಕ್ಕೂರಿನ ಡಾ. ಅವಿನಾಶ್ ಅವರ ಪತ್ನಿಯಾಗಿದ್ದು, ಉರ್ವಾ ಶೆಡಿಗುರಿಯ ಶ್ರೀ ಸುಧಾಕರ್ ಹಾಗೂ ಶ್ರೀಮತಿ ಪುಷ್ಪಾ ಅವರ ಪುತ್ರಿಯಾಗಿದ್ದಾರೆ.

Related Posts

Leave a Reply

Your email address will not be published.