ಡಿ.12ಕ್ಕೆ ಬಹುನಿರೀಕ್ಷಿತ “ಪಿಲಿಪಂಜ” ತುಳು ಸಿನಿಮಾ ಬಿಡುಗಡೆ

ಮಂಗಳೂರು: ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿಯಲ್ಲಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ “ಪಿಲಿಪಂಜ” ತುಳು ಸಿನಿಮಾ ಡಿಸೆಂಬರ್ 12 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಸಿನಿಮಾದ ಕಾರ್ಯಕಾರಿ ನಿರ್ಮಾಪಕ, ನಟ ರಮೇಶ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


ಬಳಿಕ ಮಾತಾಡಿದ ನಿರ್ದೇಶಕ ಭರತ್ ಶೆಟ್ಟಿ, “ಈಗಾಗಲೇ ಸಿನಿಮಾದ ಮೂರು ಪ್ರೀಮಿಯರ್ ಶೋಗಳು ನಡೆದಿದ್ದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ಗಂಟೆ 5 ನಿಮಿಷಗಳ ಅವಧಿಯಲ್ಲಿ ಸಿನಿಮಾ ಇರಲಿದ್ದು ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲಿ ಬೋರ್ ಆಗದಂತೆ ಸಿನಿಮಾ ಮೂಡಿಬಂದಿದೆ. ಸಿನಿಮಾಕ್ಕೆ ರಾತ್ರಿಯ ಸನ್ನಿವೇಶ ಅಗತ್ಯವಿದ್ದ ಕಾರಣ ಹೆಚ್ಚಿನ ಶೂಟಿಂಗ್ ರಾತ್ರಿಯ ವೇಳೆ ಮಾಡಲಾಗಿದೆ. ಕಲಾವಿದರು ನಿರ್ಮಾಪಕರು ಸಿನಿಮಾಕ್ಕೆ ಸಾಕಷ್ಟು ಶ್ರಮವಹಿಸಿ ದುಡಿದಿದ್ದಾರೆ. ಎಲ್ಲರೂ ಡಿ.12ರಂದು ಥಿಯೇಟರ್ ನಲ್ಲಿ ಸಿನಿಮಾ ನೋಡಿ“ ಎಂದರು.
ಪಿಲಿಪಂಜ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಮುಡಿಪುವಿನಲ್ಲಿ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾ ತೆರೆಕಾಣಲಿದೆ.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರವಿ ರಾಮಕುಂಜ, ರೂಪಶ್ರೀ ವರ್ಕಾಡಿ, ರಂಜನ್ ಬೋಳೂರು, ರಾಜ್ ಪ್ರಕಾಶ್ ಶೆಟ್ಟಿ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ಜಯಶೀಲ, ಭಾಸ್ಕ‌ರ್ ಮಣಿಪಾಲ ಮುಂತಾದವರು ಅಭಿನಯಿಸಿದ್ದಾರೆ.


ಸಹನಿರ್ಮಾಪಕಿ ಬಿಂದಿಯ ಪ್ರತೀಕ್, ಛಾಯಾಗ್ರಹಣ ಉದಯ್ ಬಳ್ಳಾಲ್, ಸಂಕಲನ ಶ್ರೀನಾಥ್ ಪವಾರ್, ಸಂಗೀತ ಎಲ್ ವಿ ಯಸ್, ಡಿ ಐ ಪ್ರಜ್ವಲ್ ಸುವರ್ಣ, ಸಿಜಿವರ್ಕ್ ಕಿರಣ್ ಬೆಂಗಳೂರು, ಸಹನಿರ್ದೇಶನ ಅಕ್ಷತ್ ವಿಟ್ಲ, ಚಿತ್ರಕಥೆ ಸಂಭಾಷಣೆ ಸುರೇಶ್ ಬಲ್ಮಠ, ಸಹಾಯಕ ನಿರ್ದೇಶನ ಸಜೇಶ್ ಪೂಜಾರಿ, ಪ್ರೊಡಕ್ಷಣ್ ಮೆನೆಜರ್ ಕಾರ್ತಿಕ್ ಜೆ. ಶೆಟ್ಟಿ, ಸಾಹಿತ್ಯ ಕೆ ಕೆ ಪೇಜಾವರ, ರಜಿತ್ ಕದ್ರಿ, ರಕ್ಷಣ್ ಮಾಡೂರು, ಹಿನ್ನೆಲೆ ಗಾಯನ ನಿಹಾಲ್ ತಾವ್ರೋ, ಕೃತಿಕಾ ಅಖಿಲ್, ಸಂದೇಶ್ ನೀರ್ ಮಾರ್ಗ, ರಕ್ಷಣ್ ಮಾಡೂರು
ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಪ್ರತೀಕ್ ಯು.ಪೂಜಾರಿ ಕಾವೂರು, ಕೆಮರಾಮ್ಯಾನ್ ಉದಯ ಬಳ್ಳಾಲ್, ನಟಿ ದಿಶಾ ರಾಣಿ, ಸಂಗೀತ ನಿರ್ದೇಶಕ ಎಲ್ವಿಯಸ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.