ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಆನ್ ಲೈನ್ ಸ್ಪರ್ಧೆಯ ಫಲಿತಾಂಶ
ಪ್ರಕಟಗೊಂಡಿದೆ. ವಿವಿಧ ಶಾಲೆಗಳ ಹಾಗೂ ಸಾರ್ವಜನಿಕವಾಗಿ ಪಿಯುಸಿವರೆಗಿನ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸ್ಪರ್ಧೆಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದು, ಸ್ಪರ್ಧಿಗಳ ಹಾಡಿನ ಪ್ರಸ್ತುತಿ, ಸ್ವರ-ತಾಳ, ಲಯ, ಹೊಂದಾಣಿಕೆಯನ್ನು ಆಧಾರವಾಗಿಟ್ಟುಕೊಂಡು ತೀರ್ಪುಗಾರರ ಮೌಲ್ಯಮಾಪನದ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಧಾನಕರ ಬಹುಮಾನದೊಂದಿಗೆ ವಿಜೇತ ತಂಡಗಳನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಕೆ.ಅರ್ , ಅರತಿ ಪುರುಷೋತ್ತಮ್ ಮತ್ತು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಕೊಟ್ಟ ಸೇವಾ ಸಂಗಮದ ಗೌರವ ಸಲಹೆಗಾರರಾದ ಡಾ. ಅನುರಾಧಾ ಕುರುಂಜಿ , ಗೌರವ ಸಲಹೆಗಾರಾದ ಚಂದ್ರಶೇಖರ ಬಿಳಿನಲೆ, ನಿಯೋಜಿತ ಅಧ್ಯಕ್ಷರಾದ ಯಶವಂತ್ ಜಯನಗರ, ದಾಖಲಾತಿ ವಿಭಾಗ ಕಾರ್ಯದರ್ಶಿ ಪೂರ್ಣಿಮಾ ಚೊಕ್ಕಾಡಿ, ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ. ಎಸ್ ಕೆ.ವಿ.ಜಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿ ದೀಕ್ಷಿತಾ ಅವರು ಪಾಲ್ಗೊಂಡಿದ್ದರು.

ಫಲಿತಾಂಶ

ಪ್ರಥಮ ಸ್ಥಾನ – ಕೆ.ಎಸ್. ಗೌಡ ಪಿ.ಯು. ಕಾಲೇಜು, ನಿಂತಿಕಲ್ಲು
ದ್ವಿತೀಯ ಸ್ಥಾನ – ಸ.ಹಿ.ಪ್ರಾ ಶಾಲೆ, ಮುಳ್ಯ ಅಟ್ಲೂರು
ತೃತೀಯ ಸ್ಥಾನ – ಕುಮಾರ ಮಂಗಳ ಶಾಲೆ, ಸವಣೂರು

ಸಮಾಧಾನಕರ ಬಹುಮಾನ ಪಡೆದ ತಂಡಗಳು (5)

1) ರೋಟರಿ ಪಿ.ಯು. ಕಾಲೇಜು

2) ಸ.ಹಿ.ಪ್ರಾ ಶಾಲೆ ಕಾಂತಮಂಗಲ

3) ರಂಗ ಮಯೂರಿ ಕಲಾ ಶಾಲೆ, ಸುಳ್ಯ

4) ಸರಕಾರಿ ಪದವಿ ಪೂರ್ವ ಕಾಲೇಜು, ಗುತ್ತಿಗಾರು

5) ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ, ಸುಳ್ಯ

ಬಹುಮಾನ ವಿತರಣೆ

ಎಲ್ಲಾ ವಿಜೇತ ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ವಿಜೇತ & ಸಮಾಧಾನಕರ ತಂಡಗಳು 03 ಜನವರಿ 2026 ರಂದು ನಡೆಯುವ ಸೇವಾ ಸಂಗಮದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಖುದ್ದಾಗಿ ಹಾಜರಿದ್ದು ಬಹುಮಾನ ಸ್ವೀಕರಿಸಬೇಕು ಎಂದು ಸಂಘದ ಆಯೋಜಕರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಮುಂದುವರಿಯಲಿವೆ ಎಂದು ಸಂಘ ತಿಳಿಸಿದೆ.

Related Posts

Leave a Reply

Your email address will not be published.