1 ಕೋಟಿ 35 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ
1 ಕೋಟಿ 35 ಲಕ್ಷ ಅನುದಾನದಲ್ಲಿ ಕಾಪು ಪುರಸಭಾ ವ್ಯಾಪ್ತಿಯ ಅಲ್ಪಸಂಖ್ಯಾತ ಕಾಲನಿಗಳ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ಕಾಪು ವಿಧಾನಸಭಾ ಕ್ಷೇತ್ರದ ಕಾಪು ಪುರಸಭಾ ವ್ಯಾಪ್ತಿಯ ಅಲ್ಪಸಂಖ್ಯಾತ ಕಾಲನಿಗಳ ರಸ್ತೆ ಅಭಿವೃದ್ಧಿಗೆ 1 ಕೋಟಿ 35 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 06-12-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಕಾಪು ಪುರಸಭೆಯ ಕಾಪು ಕೊಪ್ಪಲಂಗಡಿಯಿಂದ ಮಲ್ಲಾರು ಕೋಟೆ ರಸ್ತೆ ರೈಲ್ವೆ ಬ್ರಿಡ್ಜ್ ತನಕ ರಸ್ತೆ ಅಭಿವೃದ್ಧಿ 40 ಲಕ್ಷ, ಮಲ್ಲಾರು ರೈಲ್ವೆ ಬ್ರಿಡ್ಜ್ ನಿಂದ ಖಬರ್ ಸ್ಥಾನದ ವರೆಗೆ ರಸ್ತೆ ಅಭಿವೃದ್ಧಿ – 40 ಲಕ್ಷ, ಜನರಲ್ ಶಾಖೆ ವಾರ್ಡಿನ ಬೀಜ ಫ್ಯಾಕ್ಟರಿಯಿಂದ ನೂರ್ ಮೊಹಮ್ಮದ್ ಮತ್ತು ಅಜೀಂ ಮನೆಯಿಂದ ಸುಲೇಮಾನ್ ಮನೆ ತನಕ ರಸ್ತೆ ಅಭಿವೃದ್ಧಿ – 30 ಲಕ್ಷ, ಅಹಮದಿ ಮೊಹಲ್ಲಾ ರಸ್ತೆ ಅಭಿವೃದ್ಧಿ – 10 ಲಕ್ಷ, ಕೊಪ್ಪಲಂಗಡಿ ವಾರ್ಡಿನ ಅಲ್ಪಸಂಖ್ಯಾತರ ಕಾಲನಿ ರಸ್ತೆ ಅಭಿವೃದ್ಧಿ – 15 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 35 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರೀತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಪುರಸಭೆಯ ಸದಸ್ಯರಾದ ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ಮೋಹಿನಿ ಶೆಟ್ಟಿ, ನಾಗೇಶ್, ನೂರುದ್ದೀನ್, ಕಾಪು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿಗಳಾದ ಶಶಿಕಲಾ ಮತ್ತು ಹೈದರ್, ಸುಧಾಮ ಶೆಟ್ಟಿ, ಗುತ್ತಿಗೆದಾರರು,ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.


















