ಕುಂಜಿಬೆಟ್ಟುವಿನ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ : ಶ್ರೀ ಚಂಡಿಕಾ ಹೋಮ ಮತ್ತು ನಾಗಮಂಡಲ ಸೇವೆ

ಉಡುಪಿಯ ಕುಂಜಿಬೆಟ್ಟುವಿನ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಷಷ್ಠಿ, ಶ್ರೀ ಚಂಡಿಕಾ ಹೋಮ ಮತ್ತು ನಾಗಮಂಡಲ ಸೇವೆಯು ವಿಜೃಂಭಣೆಯಿಂದ ನಡೆಯಿತು.

ಅಂದು ಬೆಳಿಗ್ಗೆ ಷಷ್ಠಿ ಮಹೋತ್ಸವ – ಶ್ರೀ ಚಂಡಿಕಾ ಹೋಮಾ ನಡೆದು ರಾತ್ರಿ ವೇಳೆ ನಾಗಮಂಡಲ ಸೇವೆ, ನಾಗಪಾತ್ರಿಯಾದ ಎಸ್. ಗೋಪಾಲಕೃಷ್ಣ ಸಾಮಗ, ಯು. ಮೋಹನ್ ಭಟ್ ಮತ್ತು ಸಹೋದರ ಎಸ್. ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ನೆರವೇರಿತು. ಮುಸ್ಸಂಜೆಯ ಸಮಯದಲ್ಲಿ ಭಜನೆ, ವರ್ಷಾ ಶೆಣೈ ಕೆ. ಆರ್. ಅವರಿಂದ ವೀಣಾ ವಾದನ ಮತ್ತು ಸುಧೀಂದ್ರ ಅಪ್ಟೆ ಅವರಿಂದ ಮೃದಂಗ ಹಾಗೂ ಹಾಲಿಟ್ಟು ಸೇವೆ ನಡೆಯಿತು.

ಇದರೊಂದಿಗೆ ಆಶ್ಲೇಷಾ ಬಲಿ, ಶಿಲಾ ಪ್ರತಿಷ್ಠೆ, ಸರ್ಪ ಸಂಸ್ಕಾರ, ಪವಮಾನಾಭಿಷೇಕ, ಮಹಾ ಪೂಜೆ, ರಾತ್ರಿ ಪೂಜೆ, ಹೂವಿನ ಪೂಜೆ, ರಂಗ ಪೂಜೆ, ಬ್ರಹ್ಮಚಾರಿ ಆರಾಧನೆ, ಪಂಚಾಮೃತಾಭಿಷೇಕ, ನಾಗ ತಂಬಿಲ ಮತ್ತು ಫಲ ಸಮರ್ಪಣೆ ಸೇವೆಗಳು ಕೂಡ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಈ ಪ್ರಯುಕ್ತ ಭಗವದ್ ಭಕ್ತರು ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾದರು.