ಕುಸ್ತಿ ಆಟಕ್ಕೆ ವಿದಾಯ ಹೇಳಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್
ಆರೋಪಿಯ ಆಪ್ತನೇ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೇ ಸುದ್ದಿಗೊಷ್ಟಿ ನಡೆಸಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್ ಅವರು ಇನ್ನೆಂದೂ ಕುಸ್ತಿ ಆಡುವುದಿಲ್ಲ ಎಂದು ಘೋಷಣೆ ಮಾಡಿದರು.
ಭಾರತೀಯ ಕುಸ್ತಿ ಫೆಡರೇಶನ್‍ನಲ್ಲಿ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಇನ್ನೂ ನಿಲ್ಲುವ ಲಕ್ಷಣ ಇಲ್ಲ. ಮನಸಾಕ್ಸಿಯೊಡನೆ ಕುಸ್ತಿಯಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಸಾಕ್ಸಿ ಮಲಿಕ್ ಹೇಳಿದರು.
ಸಾಕ್ಸಿಯವರ ಜೊತೆಗೆ ಬಜರಂಗ್ ಪೂನಿಯಾ, ವಿನೇಶ್ ಪೆÇೀಗಟ್ ಮೊದಲಾದವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವ್ಯವಹಾರ ಬಯಲಿಗೆಳೆದಿದ್ದರು. ಅದು ಚುನಾವಣೆಗೆ ದಾರಿ ಮಾಡಿತ್ತು. ಆದರೆ ಆರೋಪಿಯ ಹಸ್ತಕ, ಆರೆಸ್ಸೆಸ್ ವ್ಯಕ್ತಿಯೇ ಮತ್ತೆ ಅಧ್ಯಕ್ಷರಾಗಿ ಗೆದ್ದಿರುವುದು ಅವ್ಯವಹಾರಿಗಳ ವಿರುದ್ಧ ಹೋರಾಡಿದವರಿಗೆ ಹತಾಶೆ ಉಂಟುಮಾಡಿದೆ.