ಉಜಿರೆ ಬಿವೋಕ್ ವಿದ್ಯಾರ್ಥಿಗಳಿಂದ ‘ಟ್ಯಾಲೆಂಟ್ಸ್ ಡೇ’ ಸಿನೆಮಾ ಬಿಡುಗಡೆ

ಉಜಿರೆ: ಎಸ್‌ಡಿಎಂ ಕಾಲೇಜಿನ ಬಿ.ವೋಕ್ (ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್) ವಿಭಾಗದ ವತಿಯಿಂದ ವಿದ್ಯಾರ್ಥಿಗಳು ನಿರ್ದೇಶಿಸಿ ನಿರ್ಮಿಸಿರುವ ವಿಭಾಗದ ಮೊದಲ ಫೀಚರ್ ಸಿನಿಮಾ ‘ಟ್ಯಾಲೆಂಟ್ಸ್ ಡೇ’ ಇದರ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಯುಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಸಿನಿಮಾ ಬಿಡುಗಡೆ ಮಾಡಿ ಮಾತನಾಡಿದ ಮನಶಾಸ್ತ್ರಜ್ಞೆ ಸಿಂಚನಾ ಉರುಬೈಲು, “ಸಿನಿಮಾ ನೋಡುವಾಗ ಇದು ವಿದ್ಯಾರ್ಥಿಗಳು ನಿರ್ಮಿಸಿರುವುದು ಎಂದು ಅನಿಸುವುದೇ ಇಲ್ಲ. ಅಷ್ಟು ಚೆನ್ನಾಗಿ ಅದು ತೆರೆ ಮೇಲೆ ಬಂದಿದೆ. ವಿದ್ಯಾರ್ಥಿಗಳ ಈ ಪ್ರಯತ್ನ ಅತ್ಯಂತ ಶ್ಲಾಘನೀಯ, ಈ ಸಿನೆಮಾ ನನ್ನ ಕಾಲೇಜು ದಿನಗಳನ್ನು ನೆನಪಿಸಿತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್‌ಡಿಎಂಇ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಜಾಗತಿಕವಾಗಿ ಇರಲಿ ಅಥವಾ ಒಂದು ಪ್ರಾದೇಶಿಕವಾಗಿಯೂ ಆಗಲಿ, ಸಿನಿಮಾ ಒಂದು ಪ್ರಬಲ ಮಾಧ್ಯಮ. ಇಂತಹ ಕ್ಷೇತ್ರಕ್ಕೆ ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಈಗಿನ ಅನಿವಾರ್ಯತೆ. ಆ ಕೆಲಸವನ್ನು ನಮ್ಮ ಕಾಲೇಜಿನ ಫಿಲ್ಮ್ ಮೇಕಿಂಗ್ ವಿಭಾಗ ಮಾಡುತ್ತಿದೆ” ಎಂದು ಶ್ಲಾಘಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಹಾಗೂ ಬಿ. ವೋಕ್ ಕೋರ್ಸ್ ಸಂಯೋಜಕ ಸುವೀರ್ ಜೈನ್, ವಿದ್ಯಾರ್ಥಿಗಳ ಯಶಸ್ವಿ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ‘ಟ್ಯಾಲೆಂಟ್ಸ್ ಡೇ’ ಸಿನೆಮಾದ ನಿರ್ದೇಶಕ ಆಂಟೋನಿ ತಮ್ಮ ಅನುಭವವನ್ನು ಹಂಚಿಕೊಡರು. ಈ ಸಂದರ್ಭದಲ್ಲಿ ಸಂಪೂರ್ಣ ಚಿತ್ರತಂಡ ಜತೆಗಿತ್ತು.
ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಜೈನ್ ವಂದಿಸಿದರು. ವಿದ್ಯಾರ್ಥಿನಿ ಫರಾನ ಕಾರ್ಯಕ್ರಮ ನಿರೂಪಿಸಿದರು.
ಪ್ರಾಯೋಗಿಕ ಕಲಿಕೆಯ ಭಾಗವಾಗಿ ಆರಂಭವಾದ ‘ಟ್ಯಾಲೆಂಟ್ಸ್ ಡೇ‘ ಸಿನೆಮಾ, ಅದನ್ನು ಮೀರಿ ಸುಮಾರು ೨ ಲಕ್ಷ ಬಜೆಟ್ನಲ್ಲಿ ನಿರ್ಮಾಣವಾಗಿದೆ ಅನ್ನೋದು ಹೆಗ್ಗಳಿಕೆ. ಸಿನೆಮಾ ಪ್ರತಿಯೊಂದು ವಿಭಾಗದಲ್ಲೂ ವಿದ್ಯಾರ್ಥಿಗಳೆ ಕೆಲಸ ಮಾಡಿದ್ದಾರೆ ಅನ್ನೋದು ಗಮನಾರ್ಹ. ಸಿನೆಮಾ, ಬಿಡುಗಡೆ ಆದ ಬಳಿಕ ಎರಡು ದಿನಗಳ ಕಾಲ ಒಟ್ಟು 10 ಶೋಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು. ಕಾಲೇಜಿನ ವಿದ್ಯಾರ್ಥಿಗಳಿಂದ, ಉಪನ್ಯಾಸಕ ವೃಂದದಿಂದ ಹಾಗೂ ಎಲ್ಲಾ ವೀಕ್ಷಕರರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು.
https://www.instagram.com/reel/CqLfZzxtS8t/?igshid=MDJmNzVkMjY%3D