ತಾಯಿಯ ಮಡಿಲಲ್ಲಿ ಕುಳಿತು ಆಶುಭಾಷಣದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ರಕ್ಷ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಿಕೆ- ನಾಡದ 8ನೇ ತರಗತಿಯ ವಿದ್ಯಾರ್ಥಿನಿ ಶ್ರೀರಕ್ಷ ಅಂಗ ವೈಕಲ್ಯವಿದ್ದರೂ, ತನ್ನ ತಾಯಿಯ ಮಡಿಲಲ್ಲಿ ಕುಳಿತುಕೊಂಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಆಶುಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಾತ್ರವಲ್ಲ ತಾಲೂಕು ಮಟ್ಟದ ಪ್ರತಿಬಾಕಾರಂಜಿಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿ, ಮುಂದೆ ನಡೆಯುವ ಜಿಲ್ಲಾ ಪಟ್ಟದ ಪ್ರತಿಬಾಕರಂಜಿಗೆ ಆಯ್ಕೆಯಾಗಿರುತ್ತಾರೆ. ಇವಳ ಈ ಸಾಧನೆಗೆ ಶಿಕ್ಷಣ ಸಂಸ್ಥೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಜೊತೆಗೆ ಇದೆ ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ತನ್ವಿ ಜಿ ಶೆಟ್ಟಿ ಇಂಗ್ಲೀಷ್ ಕಂಠಪಾಠ ದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಒಳ್ಳೆಯ ಹೆಸರು ತಂದಿರುತ್ತಾರೆ.