ಸುಳ್ಯ: ಕಸಾಪ ವತಿಯಿಂದ ಪರಿಸರ ಜಾಗೃತಿಯಾನ ಸರಣಿ ಕಾರ್ಯಕ್ರಮ

ಹೆಚ್ಚು ಹೆಚ್ಚು ತಲೆಎತ್ತುತ್ತಿರುವ ಕೈಗಾರಿಕೆಗಳು ನಮ್ಮ ಪರಿಸರದ ನಾಶಕ್ಕೆ ಕಾರಣವಾಗಿದೆ. ಅಂದು ಶ್ರೀಮಂತ ಪರಿಸರವಾಗಿದ ನಮ್ಮ ಪ್ರದೇಶ ಇಂದು ಪ್ರಸ್ತುತತೆಯ ಜೀವನ ಶೈಲಿಗೆ ಪರಿಸರ ವಿನಾಶದ ಅಂಚಿಗೆ ತೆರಳುತಿದೆ. ಪರಿಸರವನ್ನು ಸಂರಕ್ಷಿಸೋಣ ಎಂದು ಪರಿಸರ ಪ್ರೇಮಿ, ಬಂಟಮಲೆ ಅಕಾಡೆಮಿ ಅಧ್ಯಕ್ಷ ಶ್ರೀ. ಎ. ಕೆ. ಹಿಮಕರ ಹೇಳಿದರು.
ಅವರು ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ವತಿಯಿಂದ ಹಾಗೂ ಸಂಸ್ಥೆಯ ಇಕೋ ಕ್ಲಬ್ ನ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ದರು.

ಸಭಾಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ. ಶೈಲೇಶ್ ಅಂಬೆಕಲ್ಲು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾದ ಶ್ರೀ. ಪುರುಷೋತ್ತಮ ಸುಳ್ಳಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ಶ್ರೀ. ರಾಜೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಲಿಮಲೆ ಇದರ ಅಧ್ಯಕ್ಷರಾದ ಶ್ರೀ. ವಿಷ್ಣು ಭಟ್ ಮೂಲೆತೋಟ ಶುಭಹಾರೈಸಿದರು.
ವೇದಿಕೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ. ತೇಜಸ್ವಿ ಕಡಪಳ, ಕಾರ್ಯ ಕ್ರಮ ಸಂಚಾಲಕರೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಕಾರಿ ಸಮಿತಿ ಸದಸ್ಯರಾದ ಶ್ರೀಮತಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಜಿಲ್ಲಾ ಪ್ರತಿನಿಧಿ ಶ್ರೀ. ರಾಮಚಂದ್ರ ಪಲ್ಲತ್ತಡ್ಕ, ಸಂಸ್ಥೆಯ ಹಿರಿಯ ಶಿಕ್ಷಕರಾದ ಶ್ರೀ. ವಸಂತ್ ಕುಮಾರ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ. ಎ. ಕೆ. ಹಿಮಕರ ರವರನ್ನು ಗೌರವಿಸಲಾಯಿತು.

ಭಾವನ ಸುಗಮ ಸಂಗೀತ ಬಳಗದ ಶ್ರೀ. ಕೆ. ಆರ್. ಗೋಪಾಲಕೃಷ್ಣ ಹಾಗೂ ಗಾಯಕಿ ಕು. ಲಿಪಿಶ್ರೀ ಇವರಿಂದ ಪರಿಸರ ಗೀತಾ ಗಾಯನದಲ್ಲಿ ಭಾಗವಹಿಸಿದ್ದರು. ಅಂತೆಯೇ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸಂಸ್ಥೆಯ ಶಿಕ್ಷಕರಾದ ಶ್ರೀ. ಮುರಳೀಧರ ಪುನ್ಕುಟಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ತೇಜಸ್ವಿ ಕಡಪಳ ಸ್ವಾಗತಿಸಿ, ಶಿಕ್ಷಕರಾದ ವಸಂತ್ ಕುಮಾರ್ ನಾಯಕ್ ವಂದಿಸಿದರು. ಕಸಾಪ ನಿರ್ದೇಶಕಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
