ಉಳ್ಳಾಲ: ಉಳ್ಳಾಲ ಖಾಝಿ ಆಗಿ ಸೇವೆಯಲ್ಲಿದ್ದ ಫಝಲ್ ಕೋಯಮ್ಮ ತಂಙಳ್ (65) ಎಟ್ಟಿಕುಳದಲ್ಲಿ ಸೋಮವಾರ ವಿಧಿವಶರಾದರು.ಅವರ ತಂದೆ ಮರ್ಹೂಂ ತಾಜುಲ್ ಉಲಮಾ ಅವರು ಉಳ್ಳಾಲ ಖಾಝಿ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ಆಗಿದ್ದ ಸಂದರ್ಭದಲ್ಲಿ ಸಹಾಯಕ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2014ರಲ್ಲಿ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ
ಹೆಬ್ರಿ : ಮುದ್ರಾಡಿ ರಾಂಬೆಟ್ಟು ನಿವಾಸಿ ದಿ.ಉಪೇಂದ್ರ ಆಚಾರ್ಯ ಅವರ ಪತ್ನಿ ಕುಸುಮಾ ಆಚಾರ್ಯ ಎಂಬವರು ಶುಕ್ರವಾರ ಬೇಸಾಯದ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕುಸುಮಾ ಆಚಾರ್ಯ ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯಕ್ರಮ ಮತ್ತು ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ಹೆಬ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ಮೃತರು
ಉಡುಪಿ: ಜೆಸಿಬಿಗೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಮೃತ ಸವಾರನನ್ನು ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಎಂದು ಗುರುತಿಸಲಾಗಿದೆ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರ ಸಹೋದರ ಪ್ರೀತಿಶ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ, ಪ್ರತ್ಯಕ್ಷ ಶೆಟ್ಟಿ ಮನೆಯ ಆದರ
ದುಬೈಯ ಯುವ ಗಾಯಕ, ಸಮಾಜ ಸೇವಕ ಯುವರಾಜ್ ಕೆ ದೇವಾಡಿಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯುವರಾಜ್ ಕೆ ದೇವಾಡಿಗ ಅವರು ಮಂಗಳೂರಿನ ಮಂದಾರಬೈಲ್ ನ ನಿವಾಸಿಯಾಗಿದ್ದು ಶಾರ್ಜದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಇವರ ವಿವಾಹವು ಬಿಜೈ ಕಾಪಿಕಾಡಿನ ಪ್ರತಿಮಾ ಎಂಬುವವರ ಜೊತೆ ನಡೆದಿತ್ತು. ಯೌಟ್ಯೂಬ್ ಮತ್ತು ಫೇಸ್ಬುಕ್‌ನಲ್ಲಿ ಸ್ವರಬ್ರಾಮ್ಹರೀ ಎಂಬ ಚಾನೆಲ್ ಮುಖಾಂತರ ತಮ್ಮ ಹಾಡುಗಾರಿಕೆಯಿಂದ ಹಲವಾರು ಅಭಿಮಾನಿಗಳನ್ನು
ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಶಾಕ್ ಗೆ ಯುವತಿ ಸಾವನ್ನಪ್ಪಿದ್ದು ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ತಂತಿ ಸರಿಪಡಿಸುವಂತೆ ಸಂಬಂಧ ಪಟ್ಟ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಮನೆಯವರು ತಿಳಿಸಿದರೂ ಅವರು ನಿರ್ಲಕ್ಷಿಸಿದ್ದಾರೆ. ಅದ್ದರಿಂದ ಇವತ್ತು ಅಮಾಯಕ ಯುವತಿ ಬಲಿಯಾಗಿದ್ದಾಳೆ. ಈ ದುರಂತಕ್ಕೆ ಮೆಸ್ಕಾಂ ಇಲಾಖೆಯೇ ಕಾರಣ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು
ರೆಮಲ್ ಚಂಡಮಾರುತದ ಕಾರಣದಿಂದಾಗಿ ಮಿಜೋರಾಂ, ಅಸ್ಸಾಂಗಳಲ್ಲೂ ಭಾರೀ ಮಳೆ ಹಾಗೂ ಭೂಕುಸಿತದಿಂದ 31 ಮಂದಿ ಮರಣ ಹೊಂದಿದ್ದಾರೆ. ಮಿಝೋರಾಂನಲ್ಲಿ 27 ಮತ್ತು ಅಸ್ಸಾಂನಲ್ಲಿ ನಾಲ್ವರು ಮೃತರಾಗಿದ್ದಾರೆ. ಐಜ್ವಾಲ್ ಹೊರವಲಯದ ಗಣಿ ಕುಸಿತದಲ್ಲಿ ಹದಿನಾಲ್ಕು ಜನರು ಸತ್ತಿದ್ದಾರೆ. ಲಿಮೆನ್, ಸಲೇ, ಫ್ಯಾಲಗ್, ಬಬಾಲ್ ಮೊದಲಾದ ಕಡೆ 13 ಜನ ಎಂದು 27 ಮಂದಿ ಮರಣಿಸಿದ್ದಾರೆ. ಐಜ್ವಾಲ್ ಗಣಿ ಕುಸಿತದಲ್ಲಿ 12 ಮಂದಿ ನಾಪತ್ತೆಯಾಗಿದ್ದು, ಕುಸಿದ ಮಣ್ಣುಗಳಡಿ ಅವರಿಗಾಗಿ ಹುಡುಕಾಟ
ರೆಮಲ್ ಚಂಡಮಾರುತವು ಪಡುವಣ ಬಂಗಾಳದಲ್ಲಿ ಹದಿನಾರಕ್ಕೂ ಹೆಚ್ಚು ಮತ್ತು ಬಾಂಗ್ಲಾದೇಶದಲ್ಲಿ ಹದಿನೆಂಟಕ್ಕೂ ಹೆಚ್ಚು ಜನರ ಪ್ರಾಣ ಹರಣ ಮಾಡಿದೆ. ಇದೇ ವೇಳೆ ಅಮೆರಿಕ ಸಂಯುಕ್ತ ಸಂಸ್ಥಾನದ ಬಯಲು ಪ್ರದೇಶದಲ್ಲಿ ದಿಗಿಣ ಹಾಕಿದ ಸುಳಿಗಾಳಿಯು ನಾಲ್ಕು ಮಕ್ಕಳ ಸಹಿತ ಹದಿನೆಂಟಕ್ಕೂ ಹೆಚ್ಚು ಮಂದಿಯ ಜೀವವನ್ನು ಹೀರಿದೆ. ರೆಮಲ್ ಚಂಡ ಸುಂಟರ ಕುಣಿತಕ್ಕೆ ಮರಗಳುರುಳಿ, ಕಟ್ಟಡಗಳು ಜರಿದು, ಭೂಕುಸಿತ ಉಂಟಾಗಿ, ಮಾಡಿನ ತಗಡುಗಳು ತರಗೆಲೆಗಳಾಗಿ ಹಾರಿ ಎಲ್ಲೆಲ್ಲೂ ವೇಗದ ಗಾಳಿ ಮತ್ತು
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪ ಮಾ.30ರಂದು ರಾತ್ರಿ ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸಾವರ, ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ ವಿನಯ್(26ವ.)ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.31ರ ಮಧ್ಯಾಹ್ನದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಣ್ಣಂಪಾಡಿ ನಿವಾಸಿ ಜೇಕಬ್ ಅವರ
ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ (86) ಇಲ್ಲಿನ ಟಿ. ಟಿ. ರಸ್ತೆ ನಿವಾಸಿ ಅಲ್ಪ ಕಾಲದ ಅಸೌಖ್ಯದಿಂದಾಗಿ 27.03.2024 ರಂದು ಮಧ್ಯಾಹ್ನ ನಗರದ ಸ್ವಗ್ರಹದಲ್ಲಿ ನಿಧನ ಹೊಂದಿದರು. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಇವರು ಕಲ್ಕೂರ ಜಾಹಿರಾತು ಸಂಸ್ಥೆಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದರು .ದಶಕಗಳ ಕಾಲದ ಹಿಂದೆ ಪ್ರಾಥಮಿಕ ನವೋದಯ ಕಲಾವೃoದದಲ್ಲಿ ಮಸಣಕ್ಕೆ, ತರಂಗ ತರಂಗ ಅಂತರಂಗ, ಹೆಗಲಿಗೆ
ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿಯ ಪ್ರತಿಷ್ಠಾ ಪುರೋಹಿತ ಎಂ. ಧರ್ಮರಾಜ ಇಂದ್ರ (94) ಪೇಪರ್ ಮಿಲ್ ಬಳಿ ತಮ್ಮ ನಿವಾಸದಲ್ಲಿ ಬುಧವಾರ ನಿಧನ ಹೊಂದಿದರು.ರಾಷ್ಟ್ರಭಾಷಾ ವಿಶಾರದರಾಗಿದ್ದ ಅವರು ಐದು ದಶಕಗಳಿಂದ ಬಸದಿಯ ಪುರೋಹಿತರಾಗಿ, ಬಸದಿಯಲ್ಲಿ ನಿಂತು ಹೋಗಿದ್ದ ರಥೋತ್ಸವವನ್ನುಮತ್ತೆ ಆರಂಭಿಸಿದ್ದರು. ನವರಾತ್ರಿ ಪೂಜೆ, ಲಕ್ಷಕುಂಕುಮಾರ್ಚನ ಸಪ್ತಾಹ ಸಹಿತ ವಿವಿಧ ಜೈನ ಧಾರ್ಮಿಕ ಆರಾಧನೆಗಳಲ್ಲಿ ಪುರೋಹಿತರಾಗಿ ಪಾಲ್ಗೊಂಡಿದ್ದರು.ಜೈನ ಧಾರ್ಮಿಕ ಆರಾಧನಾ



























