ಸುಳ್ಯ: ರಾತ್ರಿ ಮಲಗಿರುವಾಗ ಮಹಿಳೆ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿರುವುದು ತಿಳಿದು ಬಂದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ಜಯಭಾರತಿ (56) ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಭಾವ ಶಂಕರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.ಗಂಭೀರ ಗಾಯಗೊಂಡ ಮಹಿಳೆಯನ್ನು ಸಂಬಂಧಿಕರು
ಮಂಗಳೂರಿನ ಪಡೀಲ್ ಕೊಡಕಲ್‍ನಲ್ಲಿ ಇಂದು ಜಯ ಶೆಟ್ಟಿ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಹಲವಾರು ಪ್ರಮುಖ ದಾಖಲೆ ಪತ್ರಗಳ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಗ್ನಿ ಶಾಮಕದಳದ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಜಯಶೆಟ್ಟಿ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರಬಹುದೆಂದು
ಮಂಗಳೂರಿನ ವೆಲೇನ್ಸಿಯಾ ಗೋರಿಗುಡ್ಡದಲ್ಲಿ ಜನರಲ್ ಸ್ಟೋರ್‌ವೊಂದು ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿಗಾಗುತಿಯಾದ ಘಟನೆ ನಡೆದಿದೆ. ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಜನರಲ್ ಸ್ಟೋರ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಜನರಲ್ ಸ್ಟೋರ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಪಕ್ಕದಲ್ಲೇ ಇರುವ ಗ್ಯಾರೇಜ್ ಮತ್ತು ಬಾಬಾ ಸ್ಟೋರ್‌ಗೆ ಬೆಂಕಿ ತಗುಲಿದ್ದು ಹಾನಿ ಸಂಭವಿಸಿದ್ದು ಅಪಾರ ನಷ್ಟ ಸಂಭವಿಸಿದೆ.