Home Posts tagged #Karavali (Page 3)

ಕುಂದಾಪುರ: ಜರ್ಮನಿಯ ಯುವತಿಯನ್ನು ವರಿಸಿದ ಕುಂದಾಪುರದ ಯುವಕ..!

ಜರ್ಮನಿ ಮೂಲದ ಯುವತಿಯೋರ್ವರು ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಸೆ ಏರಿದ್ದು ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ

ಪುತ್ತೂರು : ಅಪಹರಣಕ್ಕೊಳಗಾದ ಯುವಕ ಕೊಲೆ ಶಂಕೆ

ಪುತ್ತೂರಿನಲ್ಲಿ ನಡೆದ ಯುವಕ ಹನುಮಂತ ಅಪಹರಣ ಪ್ರಕರಣದ ಬಗ್ಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.ಪುತ್ತೂರಿನ ಕುಂಬ್ರ ಎಂಬಲ್ಲಿ ಜೆಸಿಬಿ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ನಿವಾಸಿ ಹನುಮಂತ (25) ಅವರನ್ನು ಮೂವರು ಅಪಹರಿಸಿ ಕೊಲೆ ಮಾಡಿ ಮೃತ ದೇಹವನ್ನು ಆಗುಂಬೆ ಘಾಟ್ ನಲ್ಲಿ ಎಸೆದಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಬಗ್ಗೆ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಅಲ್ಲದೆ ಮೃತ ದೇಹ ಎಸೆದಿರುವುದಾಗಿ ಹೇಳಲಾದ ಆಗುಂಬೆ

ಕಟೀಲು: ದಶಾವತಾರ ಯಕ್ಷಗಾನ ಮಂಡಳಿಯಿಂದ 6 ಮೇಳಗಳ ತಿರುಗಾಟ ಆರಂಭ

ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ತಿರುಗಾಟಕ್ಕೆ ದೇವಲಯದಲ್ಲಿ ಪ್ರಥಮ ಸೇವೆಯಾಟದೊಂದಿಗೆ ಪ್ರಾರಂಭವಾಯಿತು.ಈ ವೇಳೆ ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಯಕ್ಷಗಾನ ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸಿದರು.ಗೆಜ್ಜೆ ಮುಹೂರ್ತದ ಮೊದಲು ಮೇಳಗಳ ಕಲಾವಿದರಿಂದ ತಾಳಮದ್ದಳೆ ನಡೆಯಿತು ನಂತರ ರಥಬೀದಿಯಲ್ಲಿ ಚೌಕಿ ಪೂಜೆ ನಡೆದು 6 ಮೇಳಗಳಿಂದಲು ದೇವಿ ಮಹಾತ್ಮೆ

ಉಡುಪಿ: ಹರಕೆ ಈಡೇರಿತೆಂದು ಕೊರಗಜ್ಜನಿಗೆ 1002 ಮದ್ಯದ ಬಾಟಲಿ ಅರ್ಪಿಸಿದ ವ್ಯಕ್ತಿ!

ತುಳುನಾಡ ಕೊರಗಜ್ಜ ಸ್ವಾಮಿಗೆ ಮದ್ಯದ ಸಮಾರಾಧನೆ ಎಂದರೆ ಬಹಳ ಅಚ್ಚುಮೆಚ್ಚು. ಜೊತೆಗೆ ಚಕ್ಕುಲಿ, ಬೀಡಾ ಕೊಟ್ಟರಂತೂ ಇನ್ನೂ ಪ್ರೀತಿ. ವ್ಯಕ್ತಿಯೊಬ್ಬರು ತಾನು ಹೊತ್ತ ಹರಕೆ ಈಡೇರಿಸಿದರು ಎಂಬ ಕಾರಣಕ್ಕೆ ಕೊರಗಜ್ಜನಿಗೆ ಬರೋಬ್ಬರಿ 1002 ಬಾಟಲಿ ಮದ್ಯದ ಸಮಾರಾಧನೆ ಮಾಡಿದ್ದಾರೆ! ಉಡುಪಿಯಲ್ಲಿ ನಡೆದ ಅಪರೂಪದ ಹರಕೆ ತೀರಿಸುವ ಕಾರ್ಯಕ್ರಮದ ಬಗ್ಗೆ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಕರಾವಳಿಯ ದೈವರಾದನೆಯು ಜನರ ನಂಬಿಕೆಯ ಮೇಲೆ ನಿಂತಿದೆ. ಭಕ್ತರ

ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023

ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ, ದಾನವರ ವೇಶ ಭೂಷಣ, ಯಕ್ಷಗಾನದ ಸಾಂಪ್ರದಾಯಕ ಹೆಜ್ಜೆ, ಮಾತು, ರಂಗಸ್ಥಳ ಸಂಪ್ರದಾಯದಿಂದ ನಡೆಯುವ

ಕುಂದಾಪುರ: ಕಾರು-ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು

ಕುಂದಾಪುರ ತಾಲೂಕಿನ ಹೆಮ್ಮಾಡಿ ಹಾಲು ಡೈರಿ ಬಳಿ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಜಯದುರ್ಗಾ ಬಸ್ ಚಾಲಕ ಮಾಬಲ ತೋಪ್ಲು ಅವರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಎಂದಿನಂತೆ ಬಸ್ ಡ್ರೈವರ್ ಕೆಲಸವನ್ನು ನಿರ್ವಹಿಸಿ ಬಸ್ ನ್ನು ನೂಜಾಡಿ ಸ್ಟಾಪ್ ನಲ್ಲಿ ನಿಲ್ಲಿಸಿ ಬೈಕ್ ನಿಂದ ಹೆಮ್ಮಾಡಿ ಯಿಂದ ತೋಪ್ಲುಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ಹಾಲು ಡೈರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದು ಕೊಳ್ಳುತ್ತಿದ್ದ ಸಮಯದಲ್ಲಿ ಮುಳ್ಳಿಕಟ್ಟೆ

ಪಡುಬಿದ್ರಿ: ಆದ್ಯಾ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ

ನಿರಂತರ ಸಮಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮುಕ್ತೇಸರರಾದ ಜೀತೇಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಉದ್ಯೋಗ ಆಕಾಂಕ್ಷೀ ಗಳಿಗಾಗಿ ರಾಕೇಶ್ ಅಜಿಲ ಸಾರಥ್ಯದ ಆದ್ಯಾ

ಕುಂದಾಪುರ: ಬಿಲ್ಲವ ಸಮುದಾಯದಲ್ಲಿ ಒಗ್ಗಟ್ಟಿಲ್ಲ: ರವಿಕುಮಾರ್ ಎಚ್. ಆರ್ ಕಳವಳ

ಕುಂದಾಪುರ: ಸಾಕಷ್ಟು ಬಲಿಷ್ಠವಾಗಿದ್ದ ಬಿಲ್ಲವ ಸಮಾಜ 26 ಉಪಪಂಗಡಗಳಾಗಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗೂಡಿದರೆ ನಾವು ಇಡೀ ರಾಜ್ಯವನ್ನೇ ಆಳಬಹುದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್. ಆರ್ ಕಳವಳ ವ್ಯಕ್ತಪಡಿಸಿದರು. ನಗರದ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ 31 ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು

ಕರಾವಳಿಯಲ್ಲಿ ಸಾಧಾರಣ ಮಳೆ

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗದ ಕೆಲವು ಕಡೆಗಳಲ್ಲಿ ಅಲಲ್ಲಿ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವಣವಿದ್ದು, ಮಾಧ್ಯಹ್ನಾದ ಸಮಯದಲ್ಲಿ ಮಳೆ ಸುರಿದಿದೆ. ಕರಾವಳಿಯಲ್ಲಿ ಹಿಂಗಾರು ಕ್ಷೀಣಿಸುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಅಲಲ್ಲಿ ಮೋಡ ಮತ್ತು ಸಾಧಾರಣ ಮಳೆಯ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಯಾವುದೇ ಅಲರ್ಟ್ ಘೋಷಿಸಿಲ್ಲ.

ಮುಂಡ್ಕೂರು: ಮನೆಗೆ ನುಗ್ಗಿ ಬರಿಗೈಯಲ್ಲಿ ವಾಪಸ್ಸಾದ ಕಳ್ಳರು..!!

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯ ಅಲಂಗಾರು ಗುಡ್ಡೆ ಎಂಬಲ್ಲಿ ಮನೆಯ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಬರಿಗೈಯಲ್ಲೇ ವಾಪಾಸ್ಸಾಗಿದ್ದರೆ. ಅಲಂಗಾರು ಗುಡ್ಡೆಯ ಹೆಲೆನ್ ಸೆರಾವೊ ಎಂಬುವವರು ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಮನೆಗೆ ಬಂದು ನೋಡುವಾಗ ಬಾಗಿಲು ತೆರೆದಿದ್ದು, ಒಳ ರೂಮಿನಲ್ಲಿದ್ದ ಕಪಾಟುಗಳನ್ನು ಕಳ್ಳರು ಜಾಲಾಡಿಸಿ ಹೋಗಿದ್ದಾರೆ. ಆದರೆ ಮನೆಯಲ್ಲಿ ನಗ-ನಗದು ಇಲ್ಲದ ಕಾರಣ ಬರಿಗೈಯಲ್ಲೇ