Home Posts tagged #Karavali (Page 11)

ಕುಂದಾಪುರ: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು

ಕುಂದಾಪುರದಲ್ಲಿ ರವಿವಾರ ಸಂಜೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರದ ರಾಘವೇಂದ್ರ (42) ರಾಘು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್ ರವಿವಾರ ರಾತ್ರಿ ಚಿಕ್ಕಮ್ಮನಸಾಲು ರಸ್ತೆಯ ಪೋಸ್ಟ್ ಆಫೀಸ್ ಬಳಿ ತಮ್ಮ

ನೆಲ್ಯಾಡಿ: ಶಿಶಿಲ ಪೇಟೆಯಲ್ಲಿ “ಸ್ವಚ್ಛತಾ ಹಿ ಸೇವಾ” ; ಪ್ರತಿಜ್ಞಾವಿಧಿ ಬೋಧನೆ

ಕೊಕ್ಕಡ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಡಿ ಶಿಶಿಲ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧೀನ್ ಡಿ., ಉಪಾಧ್ಯಕ್ಷ ಯತೀಶ್ ಯಳಚಿತ್ತಾಯ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಆಟೋ ಚಾಲಕ ವೃಂದ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಅಂಗಡಿ ಮಾಲಕರು, ಹಾಗೂ ಸ್ಥಳೀಯ ನಿವಾಸಿಗಳು ಸ್ವಚ್ಛತಾ ಕಾರ್ಯದಲ್ಲಿ

ಯುವರಾಜ ಜೈನ್ ಗೆ ಗ್ಲೋಬಲ್ ಎಂಬಾಸಿಡೆರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ

ಮೂಡುಬಿದಿರೆ : “ಅಂತಾರಾಷ್ಟ್ರೀಯ ಎಜುಕೇಶನ್ ಎಂಡ್ ಮ್ಯಾನೇಜ್ಮೆಂಟ್ ಸಂಸ್ಥೆ”ಕೊಡಮಾಡುವ ಪ್ರತಿಷ್ಠಿತ “ಗ್ಲೋಬಲ್ ಎಂಬಾಸಿಡೆರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ ಯನ್ನು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಇವರಿಗೆ ನೀಡಿ ಗೌರವಿಸಿತು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಕಳೆದ ಮೂರು ದಶಕಗಳಿಂದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಮೂಲಕ ಗುರುಕುಲ ಮಾದರಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ

ವಿಟ್ಲ: 40 ಅಡಿ ಅಳದ ಹೊಳೆಗೆ ಬಿದ್ದ ವ್ಯಕ್ತಿಯ ರಕ್ಷಣೆ

ವಿಟ್ಲ: ಬೈಕ್ ಸೇತುವೆಗೆ ಡಿಕ್ಕಿ ಸವಾರ 40 ಅಡಿ ಆಳದ ಹೊಳೆಗೆ ಬಿದ್ದಿದ್ದು, ಸ್ಥಳೀಯ ಮುಸ್ಲಿಂ ಯುವಕರು ರಕ್ಷಣೆ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಪಾಕ ಪ್ರವೀಣ ಹರ್ಷವರ್ಧನ ಭಟ್(55) ಅವರು ಕಾರ್ಯನಿಮಿತ್ತ ಶನಿವಾರ ಮುಂಜಾನೆ 4ಗಂಟೆ ಸುಮಾರಿಗೆ ತನ್ನ ಬೈಕಿನಲ್ಲಿ ವಿಟ್ಲ ಕಡೆ ಹೊರಟಿದ್ದರು. ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸವಾರ ಹರ್ಷವರ್ಧನ

ಮಂಗಳೂರು: ಎಂಆರ್‌ಪಿಎಲ್‌ನಿಂದ ಒಂದು ಕೋಟಿ ರೂ. ಆರೋಗ್ಯ ನೆರವು

MANGALURU (V4NEWS ) : ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಒಂದು ಕೋಟಿ ರೂಪಾಯಿ ಸಹಾಯಧನ ನೀಡಿದೆ. ಎಂಆರ್‌ಪಿಎಲ್ ಸಿಎಸ್‌ಆರ್ ಫಂಡ್ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯ ಆಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿಯನ್ನು ಎಂಆರ್‌ಪಿಎಲ್ ಎಕ್ಸ್‌ಕ್ಯೂಟಿವ್ ಡೈರೆಕ್ಟರ್ ಶ್ಯಾಮ್ ಪ್ರಸಾದ್ ಕಾಮತ್ ಮುಂಡ್ಕೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಮಂಗಳೂರು:ಕರಾವಳಿ ಮೈದಾನದಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

ಕರಾವಳಿಯ ಪ್ರಮುಖ ಜನಾಕರ್ಷಣೆಯ ಮೇಳ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭವಾಗಿದ್ದು, ಕರಾವಳಿಯ ಉತ್ಸವ ಮೈದಾನದಲ್ಲಿ ವೈಭವದ ಚಾಲನೆ ದೊರಕಿದೆ. 17 ವರ್ಷಗಳಿಂದ ಮಂಗಳೂರಿಗೆ ಬರುತ್ತಿರುವ ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ ಈ ಬಾರಿ ಅಂತರ್ಜಲ ಸುರಂಗ ಮಾರ್ಗದಲ್ಲಿ ನಾನಾ ಪ್ರಭೇದದ ಮೀನುಗಳೊಂದಿಗೆ ರೋಬಾಟಿಕೆ ಅನಿಮಲ್ ಶೋಗೆ ಆದ್ಯತೆ ನೀಡಲಾಗಿದೆ. ಗ್ರಾಹಕರು ಅಂತರ್ಜಲ ಸುರಂಗ ಮಾರ್ಗದ ಮೂಲಕ ಮೇಳಕ್ಕೆ ಪ್ರವೇಶ ಪಡೆಯುವಾಗ ಸುಮಾರು 200ಕ್ಕೂ ಅಧಿಕ ಮೀನುಗಳ ಪರಿಚಯವಾಗಲಿದೆ. ಇದರ

ಪುತ್ತೂರು: ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ಪ್ರಕರಣ, ಆರು ಮಂದಿ ಆರೋಪಿಗಳ ಬಂಧನ

ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿ, ದರೋಡೆ ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ. ಅವರು ಪುತ್ತೂರು ಎಎಸ್‍ಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರಕರಣವನ್ನು ಭೇದಿಸಿದ ಬಗ್ಗೆ

ಬ್ರಹ್ಮಾವರ : ರಾಜ್ಯ ಸರ್ಕಾರದ ವಿರುದ್ಧ ಧೋರಣೆ ಖಂಡಿಸಿ, ಲಾರಿ ಮತ್ತು ಟೆಂಪೋ ಚಾಲಕರಿಂದ ಅನಿರ್ದಿಷ್ಟಾವಧಿ ಮುಷ್ಕರ

ರಾಜ್ಯ ಸರ್ಕಾರದ ವಿರುದ್ಧ ಧೋರಣೆಗಳನ್ನು ಖಂಡಿಸಿ ಲಾರಿ ಮತ್ತು ಟೆಂಪೋ ಚಾಲಕರು ಮುಷ್ಕರ ಆರಂಭಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ನೂರಾರು ಲಾರಿ ಹಾಗೂ ಟೆಂಪೊಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅನಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಬ್ರಹ್ಮಾವರ ಭಾಗದಲ್ಲಿ ಐನೂರಕ್ಕೂ ಹೆಚ್ಚು ಲಾರಿ, ಟೆಂಪೋಗಳನ್ನು ರಸ್ತೆ ಬದಿ ಸಾಲಾಗಿ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದಾರೆ.

ಉಳ್ಳಾಲ: ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

ಉಳ್ಳಾಲ:ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚಚ್೯ ಬಳಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ತೊಕ್ಕೊಟ್ಟು, ಕೃಷ್ಣ ನಗರ,ಲಚ್ಚಿಲ್ ನಿವಾಸಿ ನಾಗೇಶ್ (62)ಆತ್ಮ ಹತ್ಯೆಗೈದ ದುರ್ದೈವಿ.ನಾಗೇಶ್ ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು. ಟೆಂಪೋವನ್ನ ನಾಗೇಶ್ ಅವರು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ದಿನನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು.ಇಂದು ಬೆಳಿಗ್ಗೆ

ಉಡುಪಿ: ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ

ಭಾರತೀಯ ಸೇನೆಗೆ ಸೇರಬಯಸುವ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ ಉಡುಪಿಯಲ್ಲಿ ಆಯೋಜಿಸಲಾಗಿದೆ. ಉಡುಪಿ ಸಮೀಪದ ಉದ್ಯಾವರದ ಹಿನ್ನೀರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸೀ ಸೈಲಿಂಗ್ ತರಬೇತಿ ಕಾರ್ಯಾಗಾರದಲ್ಲಿ ಹೊರರಾಜ್ಯದ ಕೆಡೆಟ್ ಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ನೂತನ ಕೆಡೆಟ್ಗಳ ನೌಕಯಾನದ ಎಕ್ಸ್ಪೀರಿಯನ್ಸ್ ಹೇಗಿತ್ತು ಅಂತೀರಾ… ಈ ಸ್ಟೋರಿ ನೋಡಿ ಭಾರತೀಯ ನೌಕಾದಳಕ್ಕೆ ಸೇರಬಯಸುವ ಎನ್‍ಸಿಸಿ ಕೆಡೆಟ್‍ಗಳು