ಬಂಟ್ವಾಳ: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಆಕ್ಷೇಪ ಅರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ಇವರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಂಗೆ ದೂರು ನೀಡಲಾಗಿದೆ.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಭರ್ತಿಯಾಗಬೇಕಾಗಿದೆ. ಅವುಗಳಲ್ಲಿ ಮುಖ್ಯವಾಗಿ ಶಿಕ್ಷಕರ ಹುದ್ದೆ ಗಳು ಖಾಲಿ ಇವೆ. ಬಹುತೇಕವಾಗಿ ಹೊರಗುತ್ತಿಗೆ, ಗುತ್ತಿಗೆ ಆಧಾರದಲ್ಲಿ ಇಲಾಖೆಗಳಲ್ಲಿ ನೇಮಕಾತಿ ನಡೆಯುವುದರಿಂದ ಮೀಸಲಾತಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದ.ಕ. ಜಿಲ್ಲಾ
ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ‘ಡಿಗ್ರಿ ಪಾಸಾದ ಮೇಲೆ ನಿಮಗೆ ಕೆಲಸ ಸಿಗುವ ತನಕ ಯುವನಿಧಿ ನೀಡುತ್ತೇವೆ. ನಿಮ್ಮ ಭವಿಷ್ಯಕ್ಕೆ
ಬೈಂದೂರು ವ್ಯಾಪ್ತಿಯ ಉಪ್ಪುಂದ ಸಮೀಪ ಸಾಂಪ್ರದಾಯಿಕ ಪಟ್ಟಿ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ನಾಪತ್ತೆಯಾಗಿರುವ ಮೀನುಗಾರನ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ. ನೀರು ಪಾಲಾಗಿದ್ದ ಇಬ್ಬರಲ್ಲಿ ಒಬ್ಬನ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಸತೀಶ್ ಕಾರ್ವಿ ಮೀನುಗಾರನ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಮಲ್ಪೆ ಅವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿ.ಐ
ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಇರುವ ಬಸ್ ತಂಗುದಾಣದಲ್ಲಿ ಬೀದಿನಾಯೊಂದು ಸತ್ತು ಬಿದ್ದಿದ್ದು ಅದನ್ನು ತೆರವುಗೊಳಿಸಲು ಮುಂದಾಗದ ನಂದಳಿಕೆ ಗ್ರಾಮ ಪಂಚಾಯತ್ ಒಂದು ಲೋಡ್ ಮಣ್ಣು ತಂದು ಅದರ ಮೇಲೆ ಸುರಿದು ಘನಕಾರ್ಯ ನಡೆಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸತ್ತ ನಾಯಿಯ ದಫನ ಕ್ರಿಯೆಮಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸ್ಥಳೀಯಾಡಳಿ ಮುಂದಾಗಬೇಕಿತ್ತು. ಆದರೆ ನಂದಳಿಕೆ ಗ್ರಾಮ ಪಂಚಾಯತ್ ಆಡಳಿತ ವರ್ಗವು
ಐದರ ಹರೆಯದ ಬಾಲೆಯನ್ನು ಬಿಸ್ಕೆಟ್ ಆಸೆ ತೋರಿಸಿ ತನ್ನ ಕೋಣೆಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಪಡುಬಿದ್ರಿ ಕಾಮಗಾರಿ ಹಂತದಲ್ಲಿರುವ ಮಾತಾ ರೆಸಿಡೆನ್ಸಿಯಲ್ ಕಟ್ಟದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ವಿಕೃತ ಮನಸ್ಸಿನ ಕಾಮುಖ ಆರೋಪಿ ಕಲ್ಕತ್ತ ವೆಸ್ಟ್ ಬೆಂಗಾಲ್ ಮುರ್ಶಿದಾಬಾದ್ ನಿವಾಸಿ ಮಾಫಿಜುಲ್ ಶೇಖ್ಈತ ಪಡುಬಿದ್ರಿ ಅಂಚೆ ಕಛೇರಿ ಪಕ್ಕದ ನಿರ್ಮಾಣ ಹಂತದಲ್ಲಿರುವ ಮಾತಾ ರೆಸಿಡೆನ್ಸಿಯಲ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ
ಬೆಂಗಳೂರಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಕರಾವಳಿಯಲ್ಲಿ ವಿದ್ವಂಸಕ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಿರುವ ಪೊಲೀಸರು ಜನ ನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ದೇವಸ್ಥಾನ, ಪ್ರವಾಸಿ ಕೇಂದ್ರ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಶ್ವಾನ ದಳ, ಮಸೂರ ದರ್ಶಕದಿಂದ ತಪಾಸಣೆ ನಡೆಸಲರಾಂಭಿಸಿದ್ದಾರೆ. ಈಗಾಗಲೇ ಉಡುಪಿ ಕೃಷ್ಣ ಮಠ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಆಟಿ ಮಾರಿಪೂಜೆ ಸಂಭ್ರಮದಲ್ಲಿರುವ ಕಾಪುವಿನ
ಬಂಟ್ವಾಳ: ಅರಳ ಗ್ರಾಮದ ದೇಂಬುಡೆ ಎಂಬಲ್ಲಿ ಗುಡ್ಡ ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿ ರುಡಾಲ್ಫ್ ಮರ್ಕ್ ಲೋಬೋ ಅವರ ಮನೆ ಬಳಿ ಈ ಘಟನೆ ನಡೆದಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಮಣ್ಣು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ಭಾರಿ ಮತ್ತೆ ಮೇಲ್ಭಾದ ಗುಡ್ಡ ಕುಸಿದು ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಗುಡ್ಡದಲ್ಲಿದ್ದ
ಪರಿಸರವನ್ನು ಸಂರಕ್ಷಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದ್ದು, ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸವನ್ನು ಉಳಿಸಬೇಕಾಗಿದೆ ಎಂಬುದಾಗ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಹೇಳಿದ್ದಾರೆ. ಅವರು ಪಡುಬಿದ್ರಿ ಪೊಲೀಸ್ ಠಾಣೆ ಹಾಗೂ ಪಡುಬಿದ್ರಿ ರೋಟರಿ ಕ್ಲಬ್ ಜಂಟಿಯಾಗಿ ಹೆಜಮಾಡಿ ಟೋಲ್ ಗೇಟ್ ಬಳಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿ, ಮರಗಿಡಗಳ ಮಹತ್ವ ಮಹಾಮಾರಿ ಕೋವಿಡ್ ಸಂದರ್ಭ ನಾವೆಲ್ಲಾ ಅರಿತುಕೊಂಡಿದ್ದೇವೆ.
ಬಂಟ್ಚಾಳ: ಭಾರಿ ಮಳೆಗೆ ಅಮ್ಟಾಡಿ ಗ್ರಾಮದ ಮಹಲ್ ತೋಟ ರಸ್ತೆ ಬಳಿ ಬೃಹತ್ ಗಾತ್ರದ ಬಂಡೆ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ. ಲೊರಟ್ಟೊ ಪದವಿನಿಂದ ಮಹಲ್ ತೋಟ ಸಂಪರ್ಕಿಸುವ ರಸ್ತೆ ಇದಾಗಿದ್ದು ಬೆಳಿಗ್ಗೆ 8.30ರ ವೇಳೆಗೆ ಈ ಘಟನೆ ನಡೆದಿದೆ. ಪ್ರತಿದಿನ ಈ ರಸ್ತೆಯ ಮೂಲಕ ಶಾಲಾ ವಿದ್ಯಾರ್ಥಿಗಳು ತೆರಳುತ್ತಿದ್ದು ಶಾಲೆಗೆ ರಜೆ ಇದ್ದುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅಮ್ಟಾಡಿ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಲ್ಲು ತೆರವು ಕಾರ್ಯ ಕೈ